ಬೆಂಗಳೂರು: ಕೋಲಾರ ಜಿಲ್ಲೆಯ ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಾಲಾ ಮಕ್ಕಳ ಕೈಲಿ ಮಲಗುಂಡಿ ಕ್ಲೀನಿಂಗ್ ಮಾಡಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪ್ರಕಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಶಾಲಾ ಮಕ್ಕಳು ಶೌಚಾಲಯದಲ್ಲಿ ಆ್ಯಸಿಡ್ ಬಾಟಲ್ ಮತ್ತು ಬ್ಲೀಚಿಂಗ್ ಪೌಡರ್ ಹಿಡಿದು ಸ್ವಚ್ಚಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ವಲಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ಇಂತಹ ಶಿಕ್ಷಕರನ್ನು ಶೀಘ್ರವೇ ಅಮಾನತ್ತು ಮಾಡುವಂತೆ ಪೋಷಕರ ಒತ್ತಾಯ ಮಾಡಿದ್ದಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಹಾಗೆ ಸರ್ಕಾರ ಮಕ್ಕಳ ಭವಿಷ್ಯದ ಕಡೆ ಗಮನ ಹರಿಸಬೇಕೆಂದು ಒತ್ತಾಯ ಕೂಡ ಮಾಡಿದರು.
ಬೆಂಗಳೂರು ಉತ್ತರ ತಾಲೂಕಿನ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಶಾಲೆಯ ಮಕ್ಕಳ ಕೈಲಿ ಪೊರಕೆ ಕೊಟ್ಟು ಶೌಚಾಲಯ ಕ್ಲೀನಿಂಗ್ ಹಾಗೂ ನಾಲ್ಕೈದು ಮಕ್ಕಳ ಕೈಲಿ ಶೌಚಾಲಯ ಕ್ಲೀನ್ ಮಾಡಿಸಿದ ಶಾಲಾ ಆಡಳಿತ ಮಂಡಳಿ ಹಾಗೆ ಮಕ್ಕಳ ಕೈಲಿ ಮಲ ಹೋಗುವ ಜಾಗ ಕ್ಲೀನ್ ಮಾಡಿಸಿದ್ದಕ್ಕೆ ಪೋಷಕರು ಕೆಂಡಾಮಂಡಲ!
ಶಾಲೆ ಬಳಿ ಶಾಲಾ ಮಕ್ಕಳ ಪೋಷಕರಿಂದ ಪ್ರತಿಭಟನೆಗೆ ಸಜ್ಜಾಗಿದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತೀವರ ಹೋರಾಟ ನಡೆಸಲು ಮುಂದಾಗಿದ್ದಾರೆ.