ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೇಕ್ ಅನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಯಾವುದೇ ಶುಭಸಮಾರಂಭಗಳಿದ್ದರೂ ಅಲ್ಲಿ ಕೇಕ್ ಇದ್ದೇ ಇರುತ್ತದೆ. ಆದರೆ ಕೆಲವರು ಮೊಟ್ಟೆ ಹಾಕಿದ ಕೇಕ್ ತಿನ್ನಲು ಬಯಸುವುದಿಲ್ಲ. ಇಂಥವರಿಗಾಗಿಯೇ ಇವತ್ತಿನ ನಮ್ಮ ರೆಸಿಪಿಯಲ್ಲಿ ಎಗ್ಲೆಸ್ ಚಾಕ್ಲೆಟ್ ಕೇಕ್ ಯಾವ ರೀತಿ ಮಾಡಬಹುದು ಇಲ್ಲಿದೆ ನೋಡಿ!
ಬೇಕಾಗುವ ಸಾಮಗ್ರಿಗಳು:
ಕೋಕೋ ಪೌಡರ್ – ಕಾಲು ಕಪ್
ಬಿಸಿ ನೀರು – ಕಾಲು ಕಪ್
ಎಣ್ಣೆ – ಕಾಲು ಕಪ್
ಮೊಸರು – ಅರ್ಧ ಕಪ್
ಬೇಕಿಂಗ್ ಪೌಡರ್ – ಅರ್ಧ ಕಪ್
ಬೇಕಿಂಗ್ ಸೋಡಾ – ಕಾಲು ಕಪ್
ಮೈದಾ, ಗೋಧಿ ಹಿಟ್ಟು – ಮುಕ್ಕಾಲು ಕಪ್
ಸಕ್ಕರೆ – ಮುಕ್ಕಾಲು ಕಪ್
ಕಾಫಿ ಪೌಡರ್ – ಒಂದು ಚಮಚ
ಚಾಕ್ಲೆಟ್ ಸಿರಪ್ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. ಅದಕ್ಕೆ ಕೋಕೋ ಪೌಡರ್, ಕಾಫಿ ಪೌಡರ್ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಈ ಮಿಶ್ರಣಕ್ಕೆ ಸಕ್ಕರೆ, ಎಣ್ಣೆ ಹಾಗೂ ಮೊಸರನ್ನು ಹಾಕಿಕೊಂಡು ಗಂಟಿಲ್ಲದಂತೆ ತಿರುವಿಕೊಳ್ಳಿ. ಬೆಣ್ಣೆ ಅಥವಾ ತುಪ್ಪ ಇಷ್ಟಪಡುವವರು ಅದನ್ನೂ ಸೇರಿಸಿಕೊಳ್ಳಬಹುದು.
* ಈಗ ಇದಕ್ಕೆ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಗೂ ಮೈದಾ, ಗೋಧಿ ಹಿಟ್ಟನ್ನು ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ತಿರುವಿಕೊಳ್ಳಿ.
* ಬಳಿಕ ಈ ಮಿಶ್ರಣವನ್ನು ಕೇಕ್ ಟ್ರೇಗೆ ಹಾಕಿಕೊಂಡು 6 ನಿಮಿಷಗಳ ಕಾಲ ಓವನ್ನಲ್ಲಿ ಬೇಯಿಸಿಕೊಳ್ಳಿ.
* ನಂತರ ಕೇಕ್ ಅನ್ನು ಟ್ರೇಯಿಂದ ತೆಗೆದು ಒಂದು ಪ್ಲೇಟ್ಗೆ ಹಾಕಿಕೊಳ್ಳಿ. ಈಗ ಅದರ ಮೇಲೆ ಚಾಕ್ಲೆಟ್ ಸಿರಪ್ ಹರಡಿಕೊಂಡು ಅದರ ಮೇಲೆ ಹೆಚ್ಚಿದ ಡ್ರೈಫ್ರೂಟ್ಸ್ನಿಂದ ಅಲಂಕರಿಸಿ.
* ಈಗ ನಿಮ್ಮ ಚಾಕ್ಲೆಟ್ ಕೇಕ್ ಸವಿಯಲು ಸಿದ್ಧ