ಕಿಯಾ ಸೋನೆಟ್ ಫೇಸ್ಲಿಫ್ಟ್ ಅನ್ನು ಪ್ರಾರಂಭಿಸಲಾಗಿದೆ: ವಿನ್ಯಾಸ, ವೈಶಿಷ್ಟ್ಯಗಳು, ಬುಕಿಂಗ್ ವಿವರಗಳು ಮತ್ತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ ನೋಡಿ!
ಈ ಎಸ್ಯುವಿಗಾಗಿ ಪ್ರೀ ಬುಕ್ಕಿಂಗ್ ಇಂದಿನಿಂದ ಅಂದರೆ ಡಿಸೆಂಬರ್ 20ರಿಂದ ಶುರುವಾಗಿದೆ. ಹೊಸ ಸೊನೆಟ್ ಫೇಸ್ಲಿಫ್ಟ್ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳು, ಸುಧಾರಿತ ಡೈನಾಮಿಕ್ಸ್, ಹೆಚ್ಚುವರಿ ವೈಶಿಷ್ಟ್ಯಗಳು, ಹೆಚ್ಚುವರಿ ಸುರಕ್ಷತೆ, ಹೊಸ ಗೇರ್ಬಾಕ್ಸ್ ಸೇರಿ ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಬಂದಿದೆ. ಹೊಸ ಕಿಯಾ ಸೊನೆಟ್ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ಫ್ರಾಂಕ್ಸ್, ಮಹೀಂದ್ರಾ ಎಕ್ಸ್ಯುವಿ 300 ಮತ್ತು ಟಾಟಾ ನೆಕ್ಸಾನ್ಗಳೊಂದಿಗೆ ಸ್ಪರ್ಧಿಸುತ್ತಿದೆ. ಅಂತೆಯೆ ಈ ಲೇಖನದಲ್ಲಿ ನಾವು ಹೊಸ ಕಿಯಾ ಸೊನೆಟ್ ಫೇಸ್ಲಿಫ್ಟ್ ಹಾಗೂ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ನಡುವಣ ಹೋಲಿಕೆಯನ್ನು ನೋಡೋಣ
ಕಿಯಾ ಸೊನೆಟ್ ಫೇಸ್ಲಿಫ್ಟ್ ಹಾಗೂ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಒಂದೇ ಸಬ್ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಬರುತ್ತದೆ. ಹೊಸ ಸೊನೆಟ್ ಫೇಸ್ಲಿಫ್ಟ್ ಎಸ್ಯುವಿಯನ್ನು HTE, HTK, HTK+, HTX, HTX+, GTX+ ಮತ್ತು X-ಲೈನ್ ಹೀಗೆ ಒಟ್ಟು ಏಳು ಟ್ರಿಮ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಆದರೆ, ಕಿಯಾ ಇಂಡಿಯಾ ಇನ್ನೂ ಹೊಸ ಸೊನೆಟ್ ಎಸ್ಯುವಿಯ ಬೆಲೆಯನ್ನು ಪ್ರಕಟಿಸಿಲ್ಲ. ಈ ಬೆಲೆ 2024ರ ಜನವರಿಯಲ್ಲಿ ಪ್ರಕಟಗೊಳ್ಳಲಿದೆ. ಹೊಸ ಸೊನೆಟ್ ಫೇಸ್ಲಿಫ್ಟ್ ಎಕ್ಸ್ಶೋರೂಮ್ ಬೆಲೆ 8 ಲಕ್ಷ ರೂಪಾಯಿಯಿಂದ ಆರಂಭವಾಗುವ ನಿರೀಕ್ಷೆ ಇದೆ. ಆದರೆ, ಬೆಲೆ ಘೋಷಣೆಯ ಬಳಿಕವೇ ಇದಕ್ಕೆ ಉತ್ತರ ಸಿಗಲಿದೆ. ಇನ್ನು ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಸ್ಮಾರ್ಟ್, ಸ್ಮಾರ್ಟ್+, ಸ್ಮಾರ್ಟ್+ ಎಸ್, ಪ್ಯೂರ್, ಪ್ಯೂರ್ ಎಸ್, ಕ್ರಿಯೇಟಿವ್, ಕ್ರಿಯೇಟಿವ್+, ಕ್ರಿಯೇಟಿವ್+ ಎಸ್, ಫಿಯರ್ಲೆಸ್, ಫಿಯರ್ಲೆಸ್ ಎಸ್ ಮತ್ತು ಫಿಯರ್ಲೆಸ್+ ಎಸ್ ಟ್ರಿಮ್ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಇಲ್ಲಿ ‘+’ ಆಯ್ಕೆಯು ಸನ್ರೂಫ್ ಸೇರಿದಂತೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಪ್ರತಿ ರೂಪಾಂತರ ಎಕ್ಸ್ಶೋರೂಮ್ ಬೆಲೆ 8.1 ಲಕ್ಷ ರೂಪಾಯಿಯಿಂದ 15.5 ಲಕ್ಷ ರೂಪಾಯಿ ತನಕ ಇದೆ.
ಇನ್ನು ಎರಡು ಎಸ್ಯುವಿಗಳ ಉದ್ದ ಅಗಲ ವ್ಹೀಲ್ಬೇಸ್ಗಳನ್ನು ನೋಡುವುದಾದರೆ ಹೊಸ ಸೊನೆಟ್ ಎಸ್ಯುವಿ 3995 ಎಂಎಂ ಉದ್ದ, 1790 ಎಂಎಂ ಅಗಲ ಮತ್ತು 1642 ಎಂಎಂ ಎತ್ತರ ಇದೆ. ಇದರ ವ್ಹೀಲ್ಬೇಸ್ 2500 ಎಂಎಂ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 205 ಎಂಎಂ. ಇದು 392 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇನ್ನು ಹೊಸ ನೆಕ್ಸಾನ್ 3995 ಎಂಎಂ ಉದ್ದ, 1804 ಎಂಎಂ ಅಗಲ, 1620 ಎತ್ತರ ಮತ್ತು 2498 ಎಂಎಂ ವ್ಹೀಲ್ ಬೇಸ್ ಹೊಂದಿದೆ