ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ 16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2024ರ ಟೂರ್ನಿಯಲ್ಲಿ ಚಾಂಪಿಯನ್ ಟ್ರೋಫಿ ಗೆಲ್ಲುವಂತೆ ಬೆಂಬಲಿಸಿ ಎಂದು ಆರ್ಸಿಬಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ (MS Dhoni) ಉತ್ತರ ಕೊಟ್ಟಿದ್ದಾರೆ.
ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆರ್ಸಿಬಿ ಅಭಿಮಾನಿಯೊಬ್ಬರು (RCB Fan) 17ನೇ ಆವೃತ್ತಿಯಲ್ಲಿ ಆರ್ಸಿಬಿ ಕಪ್ (RCB Trophy) ಗೆಲ್ಲುವಂತೆ ನೀವು ಬೆಂಬಲಿಸಬೇಕು ಎಂದು ಧೋನಿ ಅವರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಲೆಜೆಂಡ್, ಬೆಂಗಳೂರು ನಿಜಕ್ಕೂ ಉತ್ತಮ ತಂಡವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಬಲಿಷ್ಠವಾಗಿವೆ. ಎಲ್ಲ ತಂಡಗಳು ಟ್ರೋಫಿ ಗೆಲ್ಲಲಿ ಎಂದು ನಾನು ಶುಭಕೋರಬಹುದು, ಆದ್ರೆ ನನ್ನ ತಂಡದಿಂದ ಆಚೆ ಬಂದು ಪ್ರತ್ಯೇಕವಾಗಿ ಮತ್ತೊಂದು ತಂಡವನ್ನು ಬೆಂಬಲಿಸೋದಕ್ಕೆ ಆಗಲ್ಲ. ಹಾಗೆ ಮಾಡಿದ್ರೆ ನನ್ನ ತಂಡದ ಅಭಿಮಾನಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.