ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona Virus) ಭೀತಿ ಮತ್ತೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.
ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಮಗುವಿಗೂ ಕೊರೊನಾ ವಕ್ಕರಿಸಿದೆ. ಸ್ಪರ್ಶ ಮಕ್ಕಳಧಾಮದಲ್ಲಿದ್ದ ಮಗುವಿಗೆ ಕೊರೊನಾ ಪಾಸಿಟಿವ್ (Corona Positive For Baby) ಇರುವುದು ದೃಢವಾಗಿದೆ. ಜ್ವರ, ಕೆಮ್ಮು ಅಂತ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಸದ್ಯ ತೀವ್ರ ಉಸಿರಾಟದ ತೊಂದರೆ (ಸಾರಿ) ಕೇಸ್ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ ಮಗುವನ್ನು ಐಸೋಲೆಷನ್ನಲ್ಲಿ ಇರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿ.ಸಿ ಶಿವಶಂಕರ್ ಹೇಳಿದ್ದಾರೆ.
ಸ್ವರ್ಶ ಮಕ್ಕಳ ಧಾಮದಲ್ಲಿ ಮೊದಲ ಕೊರೊನಾ ಕೇಸ್ ಹಿನ್ನೆಲೆಯಲ್ಲಿ ಮಕ್ಕಳ ಧಾಮದ 21 ಮಂದಿ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಟೆಸ್ಟಿಂಗ್ ಮಾಡಲಾಗಿದೆ. ಗಂಟಲು ದ್ರವ ಸ್ಯಾಂಪಲ್ ಪಡೆದು ಅಧಿಕಾರಿಗಳು ಟೆಸ್ಟಿಂಗ್ ಗೆ ಕಳುಹಿಸಿದ್ದು, ಸಂಜೆ ರಿಪೋರ್ಟ್ ಬರಲಿದೆ