ವಿಶ್ವಾದ್ಯಂತ ಅದ್ಧೂರಿಯಾಗಿ ಪ್ರಶಾಂತ್ ನೀಲ್-ಪ್ರಭಾಸ್ ಕಾಂಬಿನೇಶನ್ನ ‘ಸಲಾರ್’ ತೆರೆ ಕಾಣುತ್ತಿದೆ.
ಕರ್ನಾಟಕದಲ್ಲಿ ಸಲಾರ್ ಕ್ರೇಜ್ ಈಗಾಗಲೇ ಶುರುವಾಗಿದೆ. ಥಿಯೇಟರ್ ಅಂಗಳದಲ್ಲಿ ಸಲಾರ್ ಕಟೌಟ್ಸ್ ರಾರಾಜಿಸುತ್ತಿವೆ. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಸಲಾರ್ ರಿಲೀಸ್ ಆಗುತ್ತಿವೆ. ಸಲಾರ್ ಕನ್ನಡ ವರ್ಷನ್ ಸಂತೋಷ್ ಥಿಯೇಟರ್ನಲ್ಲಿ ಬಿಡುಗಡೆಗೊಳ್ಳುತ್ತಿದೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೊದಲ ಶೋಗಳು ಅಮೆರಿಕದಲ್ಲಿ ನಡೆದಿದೆ. ಮೊದಲಿನಿಂದಲೂ ಈ ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟುಹಾಕಿತ್ತು.
ಹೈದರಾಬಾದ್ನ ಕೆಲವು ಥಿಯೇಟರ್ಗಳಲ್ಲಿ ಆಫ್ಲೈನ್ನಲ್ಲಿ ಟಿಕೆಟ್ ಖರೀದಿಸಲು ಜನರು ಮುಗಿಬಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರ ದಂಡೇ ಬರೆಬೇಕಾಯಿತು.
ಬಾಹುಬಲಿ ನಂತರ ಪ್ರಭಾಸ್ಗೆ ನಿರೀಕ್ಷಿತ ಯಶಸ್ಸು ಸಿಗದ ಕಾರಣ ತೆಲುಗು ಪ್ರೇಕ್ಷಕರು ಈ ಸಿನಿಮಾ ಸೂಪರ್ ಹಿಟ್ ಆಗಲೆಂದು ಕಾಯುತ್ತಿದ್ದಾರೆ. ಸಲಾರ್ ಮೊದಲ ಶೋನಿಂದಲೇ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಮೊದಲೇ ನಿರೀಕ್ಷಿಸಿದಂತೆ ಇದು ಡಾರ್ಲಿಂಗ್ ಪ್ರಭಾಸ್ಗೆ ಮಾಸ್ ಕಮ್ ಬ್ಯಾಕ್ ಎಂದು ನೆಟಿಜನ್ಗಳು ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಭರವಸೆ ಉಳಿಸಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಭಾರೀ ನಿರೀಕ್ಷೆಗಳ ನಡುವೆ ಇಂದು ಸಲಾರ್ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ತೆಲುಗು ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಯಿತು. ಪ್ರದರ್ಶನಗಳು ಈಗಾಗಲೇ US ನಲ್ಲಿ ಪ್ರೀಮಿಯರ್ ಆಗಿವೆ. ಅದೇ ರೀತಿ ತೆಲಂಗಾಣದಲ್ಲೂ ರಾತ್ರಿಯಿಂದಲೇ ಶೋಗಳು ನಡೆಯುತ್ತಿವೆ. ಇದರಿಂದ ಸಿನಿಮಾ ನೋಡಿದವರು ಎಕ್ಸ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಅವರ ಎಲ್ಲಾ ಆಕ್ಷನ್ ಬ್ಲಾಕ್ಗಳು ವಿಭಿನ್ನ ಮಟ್ಟದಲ್ಲಿವೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಭಾಸ್ ಅವರ ಆರಂಭಿಕ ದೃಶ್ಯವು ವಿಭಿನ್ನ ಲೆವೆಲ್ ಆಗಿದೆ.. ಪ್ರಿ-ಇಂಟರ್ವೆಲ್ ವೇಳೆ ಗೂಸ್ ಬಂಪ್ಸ್ ಫಿಕ್ಸ್.. ಇಂಟರ್ವಲ್ ವೇಳೆ ಡೆತ್ ಮಾಸ್ ಎಂದು ಪೋಸ್ಟ್ ಮಾಡಿದ್ದಾರೆ.
ಬಹಳ ವರ್ಷಗಳ ನಂತರ ಮತ್ತೆ ಕಾಲರ್ ಹಾರಿಸಿಕೊಂಡು ಥಿಯೇಟರ್ ನಿಂದ ಹೊರ ಬಂದೆವು ಎಂದು ಪ್ರಭಾಸ್ ಫ್ಯಾನ್ಸ್ ಹೇಳುತ್ತಿದ್ದಾರೆ. ಇದೆಲ್ಲ ನೋಡಿದರೆ ಪ್ರಭಾಸ್ ಅವರಿಗೆ ಸಲಾರ್ ಹಿಟ್ ನೀಡುವುದು ಖಚಿತವಾಗಿದೆ.