ಹೊಸದಿಲ್ಲಿ :- ಭಾರತದಲ್ಲಿ “ಸುರಕ್ಷಿತ ಸ್ವರ್ಗ’ವನ್ನೇ ಕಂಡುಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬೇರೆ ರಾಷ್ಟ್ರಗಳಲ್ಲಿ ಕಿರುಕುಳವನ್ನು ಎದುರಿಸುತ್ತಿದ್ದರೂ, ಮುಸ್ಲಿಮರು ಭಾರತದಲ್ಲಿ “ಸುರಕ್ಷಿತ ಸ್ವರ್ಗ’ವನ್ನೇ ಕಂಡುಕೊಂಡಿದ್ದಾರೆ. ಇದು ಭಾರತದ ಸಮಾಜವು ಯಾವುದೇ ಧಾರ್ಮಿಕ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ಹೊಂದಿಲ್ಲ ಎಂಬುದಕ್ಕೆ ನಿದರ್ಶನ’ ಎಂದರು.
ದೇಶದಲ್ಲಿ ಸೂಕ್ಷ್ಮ ಅಲ್ಪಸಂಖ್ಯಾಕ ವರ್ಗವೆಂದು ಗುರುತಿ ಸಲಾಗಿರುವ ಪಾರ್ಸಿಗಳ ಆರ್ಥಿಕ ಯಶಸ್ಸಿನ ಉದಾಹರಣೆ ನೀಡಿದರು. ಅಲ್ಲದೇ, ಯಾವುದೇ ಧಾರ್ಮಿಕ ಅಲ್ಪಸಂಖ್ಯಾಕರಿಗೂ ಇಲ್ಲಿನ ಸಮಾಜ ತಾರತಮ್ಯ ತೋರುತ್ತಿಲ್ಲ. ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಸುರಕ್ಷಿತ ಸ್ವರ್ಗವನ್ನು ಭಾರತದಲ್ಲಿ ಕಂಡುಕೊಂಡಿದ್ದಾರೆ. ಸಂತೋಷವಾಗಿ, ಸಮೃದ್ಧವಾಗಿ ಜೀವಿಸುತ್ತಿದ್ದಾರೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.