ಕಲಬುರಗಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದ ಸಾರಿಗೆ ನಿಗಮಗಳ ಇತಿಹಾಸದಲ್ಲಿಯೇ ಪ್ರಥಮವಾಗಿ ತನ್ನ ನೌಕರರಿಗೆ ಪ್ರೀಮಿಯಂ ರಹಿತ ರೂ.1.20 ಕೋಟಿ ವಿಮಾ ಯೋಜನೆಗೆ ಗುರುವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಉಪಸ್ಥಿತಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ..
ಈ ವಿಮೆ ಯೋಜನೆಯಡಿ ನೌಕರರು ಅಪಫಾತದಲ್ಲಿ ನಿಧನರಾದಲ್ಲಿ ಅಂತಹ ನೌಕರರ ಅವಲಂಬಿತರಿಗೆ 1.20 ಕೋಟಿ ರೂ. ಅಪಘಾತ ವಿಮೆ ಹಣ ದೊರಕಲಿದೆ. ನೌಕರರು ಶಾಶ್ವತ ಅಂಗನ್ಯೂನ್ಯತೆ / ಭಾಗಶಃ ಶಾಶ್ವತ ಅಂಗನ್ಯೂನ್ಯತೆ ಒಳಗಾದಲ್ಲಿ 1 ಕೋಟಿ ರೂ. ವಿಮೆ ಪಡೆಯಬಹುದು. ಇದಲ್ಲದೆ ಅಪಘಾತವಲ್ಲದ ಸ್ವಾಭಾವಿಕ ಮರಣಕ್ಕೆ 5 ಲಕ್ಷ ರೂ. ವಿಮೆದೊಂದಿಗೆ ಇತರೆ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತದೆ ಅಂತ KKRTC ವ್ಯವಸ್ಥಾಪಕನಿರ್ದೇಶಕ ರಾಚಪ್ಪ ತಿಳಿಸಿದ್ದಾರೆ..