ಬೆಂಗಳೂರು:– ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿಯ ಹೊಸ ಉತ್ಪನ್ನಗಳ ಲೋಕಾರ್ಪಣೆ ಮಾಡಿದರು.
ಜತೆಗೆ ನೂತನ ರಾಯಭಾರಿ ಶಿವರಾಜಕುಮಾರ್ ಅವರ ಜಾಹೀರಾತು ಟೀಸರ್ ಬಿಡುಗಡೆ ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ನಂತರ ಸುದ್ದಿಗಾರರೊಂದಿಗೆ ಭೀಮಾನಾಯ್ಕ ಮಾತನಾಡಿ ನಂದಿನಿ ಬ್ರ್ಯಾಂಡ್ನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದೆ. ಎಮ್ಮೆಹಾಲಿಗೆ ರಾಜ್ಯದ ಗಡಿಜಿಲ್ಲೆಗಳು, ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಸಿಎಂ ಲೋಕಾರ್ಪಣೆ ಮಾಡಿದ್ದಾರೆ.
ನಂದಿನಿಯ ಮೊಸರು, 2-3 ಸಿಹಿ ಉತ್ಪನ್ನಗಳು ಬಿಡುಗಡೆಯಾಗಿವೆ. ಉತ್ಪಾದನೆ, ವಹಿವಾಟು ಮತ್ತು ಹಾಲು ಒಕ್ಕೂಟದ ಸದಸ್ಯರ ಹಿತರಕ್ಷಣೆ ವಿಷಯದಲ್ಲಿ ಕೆಎಂಎ ಸದಾ ಮುಂದಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ಸಮಸ್ಯೆಗಳು ಗೊತ್ತಿವೆ. ಈ ಹಿಂದೆ ಕೆಎಂಎ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ನಿರ್ವಹಿಸಿದ್ದಾರೆ. ಇದರಿಂದಾಗಿ ಹಾಲು ಒಕ್ಕೂಟಗಳು, ಕೆಎಂಎ ಮತ್ತು ಒಕ್ಕೂಟದ ಸದಸ್ಯರ ಬಗ್ಗೆಯೂ ಗೊತ್ತಿದ್ದು, ಹೆಚ್ಚಿನ ವಿವರಣೆ ನೀಡಬೇಕಾದ ಅಗತ್ಯವೇನಿಲ್ಲ.
ಕೆಎಂಎ ಕೋರಿಕೆಯಂತೆ ಆಗಸ್ಟ್ನಲ್ಲಿ ಹಾಲಿನ ದರವನ್ನು ಮೂರು ರೂ.ಗೆ ಹೆಚ್ಚಿಸಿದರು. ರೈತರ ತಾಪತ್ರಯ ಅರಿತಿದ್ದ ಸಿಎಂ ಸೂಚನೆಯಂತೆ ಹೆಚ್ಚಳವಾದ ಮೂರು ರೂ. ಪೂರ್ತಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.