ಅಜ್ಜಿ ಕಾಲದ ಈ ವಿಧಾನ ಅನುಸರಿಸಿದರೆ ಒಂದು ವಾರದಲ್ಲಿ ತಲೆಹೊಟ್ಟು ಮಾಯವಾಗುತ್ತಂತೆ. ಕೆಲವರಿಗೆ ವರ್ಷದ 12 ತಿಂಗಳ ಕಾಲ ತಲೆಹೊಟ್ಟು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದರೆ ನಿಮಗೆ ಗೊತ್ತಾ, ತಲೆಹೊಟ್ಟಿನಿಂದ ಹಲವು ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ಇದರಿಂದ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಡೆಯಲು ಪ್ರಾರಂಭಿಸುತ್ತದೆ, ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಮೊಡವೆಗಳು ನೆತ್ತಿಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ನೀವು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಇದನ್ನು ಮೂಲದಿಂದ ಗುಣಪಡಿಸಲು ಈ ಮಾಂತ್ರಿಕ ವಿಧಾನವನ್ನು ಪ್ರಯತ್ನಿಸಬಹುದು. ಶತಮಾನಗಳಷ್ಟು ಹಳೆಯದಾದ ಈ ವಿಧಾನ ನಿಮಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
ಕರ್ಪೂರ
2 ರೂ.ಗೆ ಸಿಗುವ ಕರ್ಪೂರ ನಿಮಗೆ ತುಂಬಾ ಪ್ರಯೋಜನಕಾರಿ. ಕರ್ಪೂರದಲ್ಲಿ ಆಯಂಟಿ ಫಂಗಲ್ ಮತ್ತು ಆಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಕೂದಲಲ್ಲಿ ಎಲಾಸ್ಟಿನ್ ಮತ್ತು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ತೆಂಗಿನೆಣ್ಣೆ ಬಳಸಿ ತಲೆಹೊಟ್ಟು ಹೋಗಲಾಡಿಸಬಹುದು.
ತೆಂಗಿನ ಎಣ್ಣೆ ಮತ್ತು ಕರ್ಪೂರದ ಮಿಶ್ರಣವು ಪರಿಣಾಮಕಾರಿ
ಕರ್ಪೂರದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಹೋಗಲಾಡಿಸುವಲ್ಲಿ ಪರಿಣಾಮಕಾರಿ. ಇದಲ್ಲದೆ, ಇದು ತ್ವರಿತವಾಗಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯು ನೆತ್ತಿಯ ಶುಷ್ಕತೆಯನ್ನು ಹೋಗಲಾಡಿಸಿ, ತಂಪು ನೀಡುತ್ತದೆ.
ಮಿಶ್ರಣ ತಯಾರಿಸುವ ವಿಧಾನ
ಅರ್ಧ ಕಪ್ ತೆಂಗಿನ ಎಣ್ಣೆಯಲ್ಲಿ 2 ಮಾತ್ರೆ ಕರ್ಪೂರವನ್ನು ಮಿಶ್ರಣ ಮಾಡಿ. ಕರ್ಪೂರದ ಮಾತ್ರೆಗಳನ್ನು ಪುಡಿಮಾಡಿ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಕರ್ಪೂರ ಕರಗುವವರೆಗೆ ತೆಂಗಿನ ಎಣ್ಣೆಯನ್ನು ಗ್ಯಾಸ್ ಮೇಲೆ ಬಿಸಿ ಮಾಡಿ.
ಇದನ್ನು ಹಚ್ಚುವ ವಿಧಾನ
ತೆಂಗಿನಕಾಯಿ ಎಣ್ಣೆ ಮತ್ತು ಕರ್ಪೂರದ ಮಿಶ್ರಣದಿಂದ ತಯಾರಿಸಿದ ಈ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ, ತಲೆಯನ್ನು ಮೃದುವಾಗಿ ಮಸಾಜ್ ಮಾಡಿ. ಈ ಮಿಶ್ರಣವನ್ನು ಹಚ್ಚಿದ ನಂತರ ರಾತ್ರಿಯಿಡೀ ಹಾಗೆಯೇ ಬಿಡಿ. ಬೆಳಗ್ಗೆ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ತಲೆಹೊಟ್ಟು ಮಾಯವಾಗುತ್ತದೆ ಎನ್ನಲಾಗಿದೆ.