ಬೆಂಗಳೂರು ಗ್ರಾಮಾಂತರ: ಪ್ರೇಮಿಗಳಿಬ್ಬರು ರಸ್ತೆಯಲ್ಲಿ ಕಿತ್ತಾಟ ಮಾಡುವಾಗ ಮಧ್ಯಪ್ರವೇಶದ ಗುಂಪೊಂದು ಪ್ರೇಮಿಗೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಯುವ ಪ್ರೇಮಿಗಳಿಬ್ಬರೂ ಪ್ರೀತಿ ಮಾಡುತ್ತಿದ್ದರು ಇಬ್ಬರು ಕೂಡ ಮಂಗಳೂರಾಗಿದ್ದರು ಯುವತಿ ಆನೇಕಲ್ ಪಟ್ಟಣದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಳು ಇತ್ತೀಚಿಗೆ ಯುವತಿ ಯುವಕನ ಫೋನ್ ರಿಸೀವ್ ಮಾಡುತ್ತಿರಲಿಲ್ಲ ಹೀಗಾಗಿ ಇಂದು ಆನೇಕಲ್ ಪಟ್ಟಣಕ್ಕೆ ಆಗಮಿಸಿದ ಯುವಕ ಯುವತಿ ಭೇಟಿಯಾಗಿದ್ದರು ಬಳಿಕ ಜೊತೆಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡು ಆನೇಕಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಬಂದಿದ್ದರು ಈ ಮಧ್ಯೆ ಇಬ್ಬರ ನಡುವೆ ಜಗಳ ಶುರುವಾಗಿದೆ.
ಜಗಳ ಆಗುತ್ತಿದ್ದಾಗ ಮಧ್ಯಪ್ರವೇಶಿಸಿದ ಇನ್ನೊಂದು ಗುಂಪು ಯುವಕನಿಗೆ ನಡು ರಸ್ತೆಯಲ್ಲಿ ಪ್ರಾದೇಶಿಕ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ ಆನೇಕಲ್ ಪೊಲೀಸ್ ಠಾಣೆ ಸಮೀಪದಲ್ಲಿ ನಡೆದಿದ್ದು ಸದ್ಯ ಯುವಕ ಮತ್ತು ಯುವತಿಯನ್ನು ಆನೇಕಲ್ ಠಾಣೆಗೆ ಕರೆದು ಇದು ವಿಚಾರಣೆ ಮಾಡುತ್ತಿದ್ದಾರೆ.. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…