ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತಿಚ್ಚೆಗಷ್ಟೆ ಲೋಕಾರ್ಪಣೆಗೊಂಡ ವಿಮಾನ ನಿಲ್ದಾಣ ಮುಖಟಮಣಿಯಾಗಿದೆ. ವಿಮಾನ ಯಾನ ಆರಂಭವಾದಗಿಂದ ಜನರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. 80 ಆಸನವುಳ್ಳ ವಿಮಾನದಲ್ಲಿ ಕನಿಷ್ಠ ಏನಿಲ್ಲವೆಂದರೂ 60 ಕ್ಕಿಂತ ಹೆಚ್ಚು ಆಸನಗಳು ಮುಂಗಡವಾಗಿ ಬುಕ್ಕಿಂಗ್ ಆಗಿರುವುದು ಏರ್ ಲೈನ್ ಗೆ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರೀಯೆಯಾಗಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಕೆಲವು ತಾಂತ್ರಿಕ ದೋಷಗಳಿಂದಾಗಿ ವಿಮಾನ ಲ್ಯಾಂಡಿಂಗ್ ಆಗುವುದು ಮತ್ತು ಟೇಕ್ ಆಫ್ ಆಗುತ್ತಿರುವುದು ವಿಳಂಬವಾಗುತ್ತಿದೆ. ಇದರಿಂದ ಪ್ರಯಾಣಿಕರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಹುದಿನ ನಿರೀಕ್ಷೆ ಯಾಗಿದ್ದ ಅಂತರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣವೇನೋ ಲೋಕಾರ್ಪಣೆಗೊಂಡು ಅರ್ದ ವರ್ಷವೇ ಕಳೆದಿದೆ. ಜನರ ನಿರೀಕ್ಷೆಯಂತೆ ಹೈಟೆಕ್ ಸ್ಪರ್ಷ ಪಡೆದಿರುವ ವಿಮಾನ ನಿಲ್ದಾಣದಲ್ಲಿ ಕೆಲವು ನ್ಯೂನ್ಯತೆಗಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಚಳಿಗಾಲದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಟೇಕಾಫ್ ಆಗುವುದು ಮತ್ತು ಲ್ಯಾಂಡಿಂಗ್ ಆಗುವುದು ಕಷ್ಟವಾಗಿದೆ. ಅತಿಯಾದ ಮಂಜುಕವಿದ ವಾತಾವರಣ ವಿಮಾನ ಯಾನಕ್ಕೆ ಅಡ್ಡಿಯಾಗಿದೆ.
Winter Health: ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು ಸಮಸ್ಯೆಯೇ?: ಈ ವಸ್ತುಗಳನ್ನ ತಯಾರಿಸಿ ಟೀ ಕುಡಿದು ನೋಡಿ!
ಮೊದಲೇ ಭದ್ರಾ ಅಭಯಾರಣ್ಯದ ಸನಿಹವಿರುವ ವಿಮಾನ ನಿಲ್ದಾಣದಲ್ಲಿ ಪ್ರಕೃತಿದತ್ತವಾಗಿ ಹಿಮ ಕವಿದ ವಾತಾವರಣ ಸದಾ ಹಸಿರಾಗಿಯೇ ಇರುತ್ತದೆ. ಇದು ನೋಡುಗರಿಗೆ ಮುದವೆನಿಸಿದರೂ ವಿಮಾನಯಾನಕ್ಕೆ ದೊಡ್ಡ ಸೆಟ್ ಬ್ಯಾಕ್ ಆಗಿದೆ. ಈಗಾಗಲೇ ಮಂಜು ಕವಿದ ವಾತಾವರಣದಿಂದಾಗಿ ಮೂರು ಬಾರಿ ವಿಮಾನಯಾನ ರದ್ದು ಗೊಂಡಿದೆ. ಶಿವಮೊಗ್ಗದಿಂದ ಗೋವಾಕ್ಕೆ ಹೊರಡಬೇಕಿದ್ದ ವಿಮಾನಕ್ಕೂ ಮಂಜು ಕವಿದ ವಾತಾವರಣ ಅಡ್ಡಿಯಾಗಿದ್ದರಿಂದ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಹಾಗೆ ಗಮನಿಸಿದರೆ ಬೆಂಗಳೂರು ಹೊರತು ಪಡಿಸಿದರೆ, ಶಿವಮೊಗ್ಗ ವಿಮಾನ ನಿಲ್ದಾಣ ಎರಡನೇ ದೊಡ್ಡ ವಿಮಾನ ನಿಲ್ದಾಣವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಈಗಾಗಲೇ ನೈಟ್ ಲ್ಯಾಂಡಿಂಗ್ ಗೂ ಕಾಮಗಾರಿ ಪ್ರಗತಿಯಲ್ಲಿದೆ.ಯ ಇದರ ನಡುವೆ ಚಳಿಗಾಲದ ಮೋಡ ಮುಸಿಕಿದ ವಾತಾವರಣದಲ್ಲಿ ವಿಸಿಬಲ್ ಲ್ಯಾಂಡಿಂಗ್ ಮಾಡಲು ಕೆಲಸ ಕಾರ್ಯಗಳು ನಡೆಯುತ್ತಿದೆ. ಇನ್ ಸ್ಟ್ರೂ ಮೆಂಟಲ್ (ಐಎನ್ ಎಸ್) ಲ್ಯಾಂಡಿಂಗ್ ಗಾಗಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದು ವಿಷುವಲ್ ಪ್ಲೈಟ್ ಲ್ಯಾಂಡಿಂಗ್ ಆಗಿದ್ದು, ಎಲ್ಲಾ ಹವಾಮಾನಗಳಲ್ಲೂ ವಿಮಾನ ಸಂಚರಿಸಬಹುದಾಗಿದೆ.
ಈ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು ನೈಟ್ ಲ್ಯಾಂಡಿಂಗ್ ತಂತ್ರಜ್ಞಾನಕ್ಕೂ ಅತ್ಯವಶ್ಯಕವಾಗಿದೆ.ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಹವಾಮಾನದಲ್ಲೂ ಸಂಚರಿಸುವ ವಿಮಾನ ಯಾನಕ್ಕೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ನೂತನವಾಗಿ ಪ್ರಾರಂಭವಾಗಿದ್ದು, ಇನ್ನು ತಂತ್ರಜ್ಞಾನ ಅಳವಡಿಸುವಂತ ಕಾರ್ಯಗಳು ನಡೆಯುತ್ತಿದೆ.
ಶಿವಮೊಗ್ಗ ವಿಮಾನ ನಿಲ್ಗಾಣದಲ್ಲಿ ವಿಮಾನ ಸಂಚಾರ ಮಾರ್ಗಕ್ಕೇನು ಅಡೆತಡೆಗಳಿಲ್ಲ. ಆದರೆ ಎಲ್ಲಾ ಹವಾಮಾನದಲ್ಲಿ ವಿಮಾನಸೇವೆ ಲಭಿಸಿದರೆ. ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದ್ರಾಬಾದ್ ವಿಮಾನ ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಚೆನ್ನೈ, ದಿಲ್ಲಿ, ಮುಂಬಯಿ ಮತ್ತಿತರ ನಗರಗಳಿಗೂ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಜೊತೆಗೆ ಏರ್ಪೋರ್ಟ್ನಲ್ಲಿರುವ ಜಾಗವನ್ನು ಬಳಸಿಕೊಂಡು ಕಾರ್ಗೋ, ಕೋಲ್ಡ್ ಸ್ಟೋರೇಜ್ ಸೇವೆ ಆರಂಭವಾಗಲಿದೆ. ವಿಶಾಲವಾದ ಸ್ಥಳಾವಕಾಶ ಹೊಂದಿರುವ ಶಿವಮೊಗ್ಗ ವಿಮಾನದ ಸಣ್ಣಪುಟ್ಟ ನ್ಯೂನ್ಯತೆಗಳು ಸರಿಯಾಗಬೇಕಿದೆ.