ಬೆಂಗಳೂರು: ನಾವು ಹೆಲ್ತ್ ಡಿಪಾರ್ಟ್ಮೆಂಟ್ ಗೈಡ್ ಲೈನ್ಸ್ ಸ್ವೀಕರಿಸುತ್ತೇವೆ. ಆತಂಕ ಸಂದರ್ಭದಲ್ಲಿ ಇಲ್ಲ, ಆದರೆ ಜವಾಬ್ದಾರಿ ಸ್ಥಾನದಲ್ಲಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋವಿಡ್ ಬಗ್ಗೆ ಈಗಾಗಲೇ ಎಲ್ಲರಿಗೂ ಅನುಭವ ಆಗಿದೆ. ಇಂಥ ಸಂದರ್ಭದಲ್ಲಿ ಹೇಗಿರಬೇಕು ಅಂತ ಗೊತ್ತಿದೆ. ಮಕ್ಕಳಿಗೆ ಶೀತ ಜ್ವರ ಇದ್ದರೇ ಪೋಷಕರು ಜವಾಬ್ದಾರಿ ತಗೋತಾರೆ. ನಾವು ಆರೋಗ್ಯ ಇಲಾಖೆ ಗೈಡ್ ಲೈನ್ಸ್ ನೋಡಿ ನೋಟಿಸ್ ಕೊಡ್ತೀವಿ. ಅವರು ಎಲ್ಲಾ ಆಯಾಮಗಳಲ್ಲೂ ಕವರ್ ಮಾಡಿರ್ತಾರೆ. ಅವರೇನಾದ್ರೂ ಬಿಟ್ಟಿದ್ರೆ ನಾವು ಅದಕ್ಕೆ ಸೇರಿಸ್ತೀವಿ ಅಷ್ಟೆ.
ಪ್ರವಾಸ ಹೋಗಿ ಬಂದಾಗ ಜ್ವರ, ಕೋಲ್ಡ್ ಇದ್ರೆ ಟೆಸ್ಟ್ ಮಾಡಿಸ್ಬೇಕಾಗ್ಬೋದು. ಇಲ್ಲಿಯವರೆಗೆ ನಾನು ಯಾವುದೇ ನಿರ್ಧಾರ ತಗೊಂಡಿಲ್ಲ. ಇವತ್ತು ಆರೋಗ್ಯ ಇಲಾಖೆಯಿಂದ ಏನು ಗೈಡ್ ಲೈನ್ ಬರುತ್ತೋ ಅದನ್ನು ನಾವು ಸ್ಕೂಲ್ಗಳಲ್ಲಿ ಪಾಲಿಸೋಕೆ ಹೇಳ್ತೀವಿ. ಕೊರೊನಾ ಬುದ್ದಿ ಕಲಿಸಿದೆ, ಎಲ್ಲರಿಗೂ ಗೊತ್ತಿದೆ ಹಾಗಾಗಿ ಪ್ರಿಕಾಕ್ಷನ್ ಎಲ್ಲರೂ ತಗೋತಾರೆ ಎಂದರು.