ಕನ್ನಡದ ಖ್ಯಾತ ಗೀತರಚನೆಕಾರ ವಿಜಯನಾರಸಿಂಹ (Vijayanarasimha) ಅವರ ಪುತ್ರಿ ಸವಿತಾ ಪ್ರಸಾದ್ (Savita Prasad) (72) ಅಲ್ಪ ಕಾಲೀನ ಅನಾರೋಗ್ಯದ ನಂತರ ನಿನ್ನೆ ಬೆಳ್ಳಿಗ್ಗೆ ನಿಧನರಾಗಿದ್ದಾರೆ (passed away). ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಂದೆಯ ಕೃತಿಗಳನ್ನು ಸಂರಕ್ಷಿಸುವಲ್ಲಿ ಕಾಳಜಿ ವಹಿಸುತ್ತಿದ್ದ ಸವಿತಾ ತೀರಾ ಇತ್ತೀಚೆಗೆ ತಂದೆಯವರ ಕಥೆಗಳ ಸಂಕಲನವನ್ನು ತರಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುಮತಿ ನೀಡಿದ್ದರು ಎಂದು ಹಿರಿಯ ಪತ್ರಕರ್ತ ಎನ್.ಎಸ್. ಶ್ರೀಧರ್ ಮೂರ್ತಿ ತಿಳಿಸಿದ್ದಾರೆ.
1951ರ ಜನವರಿ 4ರಂದು ಜನಿಸಿದ್ದ ಸವಿತಾ ಮದ್ರಾಸಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನ ನಡೆಸಿದ್ದರು. ಕನ್ನಡ ಪ್ರೀತಿಯನ್ನು ಸದಾ ಜಾಗೃತವಾಗಿಟ್ಟು ಕೊಂಡಿದ್ದರು. ತಮ್ಮ ಮಕ್ಕಳಲ್ಲಿ ಕೂಡ ಕನ್ನಡ ಪ್ರೇಮವನ್ನು ಬೆಳೆಸಿದ್ದರು. ತಂದೆಯವರ ಕುರಿತು ನಿರಂತರವಾಗಿ ಕಾರ್ಯಕ್ರಮಗಳು ನಡೆಯಲು ಕೂಡ ಅವರು ಕಾರಣಕರ್ತರಾಗಿದ್ದರು. ಅವರ ಪತಿ ಮತ್ತು ಪ್ರಾದ್ಯಾಪಕ, ಅನುವಾದಕ ಶಾರದಾ ಪ್ರಸಾದ್ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು ಅವರ ಒಬ್ಬ ಮಗ ಸಂದೀಪ್ ಕೂಡ ನಿಧನರಾಗಿದ್ದರು. ಈಗ ಸುದತ್ತಾ ಮತ್ತು ಅರ್ಚನಾ ಎನ್ನುವ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.