ಚಿಕ್ಕೋಡಿ: ಕಳೆದ 27 ದಿನಗಳಿಂದ ಅಥಣಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೇವೆ ಖಾಯಮ್ಮಾತಿಗಾಗಿ ಧರಣಿ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಈ ದಿನ ರಕ್ತದಾನ ಮಾಡಿ ಗಮನ ಸೆಳೆದರು.ತಹಸೀಲ್ದಾರ ಕಚೇರಿ ಆವರಣದಲ್ಲಿ ಧರಣಿ ಸ್ಥಳದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿದರು. ಈ ವೇಳೆ ಹಿರಿಯ ಉಪನ್ಯಾಸಕ ಪಿ ಎಲ್ ಪೂಜಾರಿ ಮಾತನಾಡಿ, ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹದಲ್ಲಿ ನಮ್ಮ ಅಥಣಿ ತಾಲೂಕಿನ ಸ್ನೇಹಿತರು ವಿಭಿನ್ನ ಮಾದರಿಯಲ್ಲಿ ಧರಣಿ ಮಾಡುತ್ತಿದ್ದು ಇಂದು ರಕ್ತದಾನ ಮಾಡಿ ಸತ್ಯಾಗ್ರಹ ಮಾಡುತ್ತಿದ್ದಾರೆ.
ಇಂದು ಹಲವಾರು ಅಥಿತಿ ಉಪನ್ಯಾಸಕರು ರಕ್ತದಾನ ಮಾಡಿದ್ದು ಸುಮಾರು 20-25 ವರ್ಷಗಳಿಂದ ಸರಕಾರ ಸರ್ಕಾರಿ ಕಾಲೇಜುಗಳಲ್ಲಿ ನಮ್ಮನ್ನು ದುಡಿಸಿಕೊಳ್ಳುತ್ತಿದೆ. ನಾವು ಸರ್ಕಾರಕ್ಕೆ ರಕ್ತ ಕೊಟ್ಟೇವು ಹೊರತು – ಖಾಯಮಾತಿ ಬೇಡಿಕೆ ಬಿಡುವುದಿಲ್ಲ ಖಾಯಂ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಸುಮಾರು ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಜಾಣ ಕುರುಡನಂತೆ ಮೌನ ವಹಿಸಿ ವರ್ತಿಸುತ್ತಿರುವುದು ನಮ್ಮನ್ನು ಆತಂಕ್ಕೆ ಈಡು ಮಾಡಿದೆ, ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ತೀವ್ರ ಮಾಡುತ್ತೇವೆ ಎಂದು ಎಚ್ಚರಿಸಿದ ಅವರು ಮಾನವೀಯತೆಗೆ ಸಾಮಾಜಿಕ ನ್ಯಾಯಕ್ಕೆ ಹೆಸರಾದ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.
Winter Health: ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು ಸಮಸ್ಯೆಯೇ?: ಈ ವಸ್ತುಗಳನ್ನ ತಯಾರಿಸಿ ಟೀ ಕುಡಿದು ನೋಡಿ!
ಉಪನ್ಯಾಸಕ ಆರ್ ಎಸ್ ಅಂಬಿ ಮಾತನಾಡಿ ಉಪನ್ಯಾಸಕರಿಗೆ ಕೇವಲ ವಿದ್ಯಾದಾನ ಮಾಡುವುದಷ್ಟೇ ಅಲ್ಲ ರಕ್ತದಾನ ಮಾಡುವುದು ಕೂಡ ನಮಗೆ ಗೊತ್ತು ಕಳೆದ ಒಂದು ತಿಂಗಳಿಂದ ವಿವಿಧ ರೀತಿಯಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ, ಇಂದು ರಕ್ತದಾನ ಮಾಡುವ ಮೂಲಕ ನಾವು ಪ್ರತಿಭಟನೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧರಾಗಿದ್ದೇವೆ.ಹೀಗೆ ನಾವು ವಿವಿಧ ರೀತಿಗಳಲ್ಲಿ ಪ್ರತಿಭಟನೆಗಳನ್ನುಮಾಡುತ್ತಿದ್ದರೂ ಸಹ ಸರ್ಕಾರ ಮಾತ್ರ ಬಾಯಿ ಬಿಡುತ್ತಿಲ್ಲ ಏನೇ ಆದರೂ ನಾವು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವವರೆಗೂ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.