ಹುಬ್ಬಳ್ಳಿ: ರೋಲರ್ ಸ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ 2023 ವತಿಯಿಂದ ಡಿಸೆಂಬರ 18 ರಿಂದ 22 ರವರೆಗೆ ಚೆನೈನಲ್ಲಿ ಹಮ್ಮಿಕೊಳ್ಳಲಾಗಿದ್ದ 61ನೇ ರಾಷ್ಟ್ರೀಯ ರೋಲರ್ ಸ್ಟೇಟಿಂಗ್ ಸ್ಪರ್ಧೆಯಲ್ಲಿ ತ್ರೀಶಾ. ಪಿ. ಜಡಾಲಾ ಮತ್ತು ಸಾಕ್ಷಿ . ಪಿ. ಕಡ್ಡಿ ರೋಲರ್ ಡರ್ಬಿಯಲ್ಲಿ ಕಂಚಿನ ಪದಕ ಪಡೆದು ವಿಜೇತರಾಗಿದ್ದಾರೆ.
ತರಬೇತಿದಾರ ಅಕ್ಷಯ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕಟಿಂಗ್ ಪ್ರಧಾನ ಕಾರ್ಯದರ್ಶಿಯವರಾದ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು , ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅದ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ . ಹರ್ಷ ವ್ಯಕ್ತಪಡಿಸಿದ್ದಾರೆ.