ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ವೆಬ್ ಬ್ರೌಸರ್ನಲ್ಲಿ ಸರ್ಚ್ ಮಾಡಿದ್ದು, ನೋಡಿದ್ದು ಯಾವುದು ಸಹ ಹಿಸ್ಟರಿಯಲ್ಲಿ ಉಳಿಯಬಾರದು, ವೆಬ್ ಬ್ರೌಸರ್ ಸೇವೆ ನೀಡುವವರು ಸಹ ಈ ಡಾಟಾವನ್ನು ಬಳಕೆ ಮಾಡಬಾರದು, ಬಳಕೆದಾರರ ಈ ರೀತಿಯ ಯಾವುದೇ ಡಾಟಾವು ಆನ್ಲೈನ್ನಲ್ಲಿ ಯಾರಿಗೂ ಸಿಗಬಾರದು, ಭೇಟಿ ನೀಡಿದ ವೆಬ್ಪೇಜ್ಗಳ ರೆಕಾರ್ಡ್ ಸಂಪೂರ್ಣ ಖಾಸಗಿ ಆಗಿರಬೇಕು, ಯಾರಿಗೂ ಗೊತ್ತಾಗಬಾರದು ಎಂದರೆ ವೆಬ್ ಬ್ರೌಸರ್ನಲ್ಲಿ ಇನ್ಕಾಗ್ನಿಟೊ ಮೋಡ್ ಎಂಬ ಸೆಟ್ಟಿಂಗ್ ಅನ್ನು ಬಳಕೆ ಮಾಡಬೇಕು ಎನ್ನುತ್ತಾರೆ ಹಲವರು. ಹಾಗಿದ್ರೆ ಇದು ಸಂಪೂರ್ಣ ಖಾಸಗಿಯೇ, 100% ಯಾರಿಗೂ ಈ ಡಾಟಾ ಮಾಹಿತಿ ಸಿಗುವುದಿಲ್ಲವೇ ಎಂಬುದು ಹಲವರ ಪ್ರಶ್ನೆ. ಇದಕ್ಕೆ ಉತ್ತರವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ
ಗೂಗಲ್ನ ಇನ್ಕಾಗ್ನಿಟೊ ಮೋಡ್ ಎಂದರೇನು? ಇದು ಖಂಡಿತ ಸಂಪೂರ್ಣ ಖಾಸಗಿಯೇ?
ಗೂಗಲ್ ಪ್ರಕಾರ ಪ್ರಪಂಚದಾದ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಕ್ರೋಮ್ ಬ್ರೌಸರ್ನಲ್ಲಿನ ‘ಇನ್ಕಾಗ್ನಿಟೊ ಮೋಡ್’ ಬಳಕೆದಾರರಿಗೆ ವೆಬ್ ಟ್ರ್ಯಾಕಿಂಗ್ ಕುಕೀಸ್ಗಳಿಂದ ಸ್ವತಂತ್ರವಾಗಿ ಹಾಗೂ ಇಂಟರ್ನೆಟ್ ಬಳಕೆಯ ಹಿಸ್ಟರಿಯು ಉಳಿಯದಂತೆ ಬಳಸುವ ಫೀಚರ್ ಅನ್ನು ಆಫರ್ ಮಾಡುತ್ತದೆ. ಬಳಕೆದಾರರು ಈ ಕ್ರೋಮ್ ಬ್ರೌಸರ್ನ ‘ಇನ್ಕಾಗ್ನಿಟೊ ಮೋಡ್’ ನಲ್ಲಿ ಬ್ರೌಸ್ ಮಾಡಿದ್ದು ಒಮ್ಮೆ ಕ್ಲೋಸ್ ಮಾಡಿದ ನಂತರ ಅಲ್ಲಿ ಹಿಸ್ಟರಿಯಾಗಿ ಉಳಿಯುವುದಿಲ್ಲ ಎಂಬುದು ಗೂಗಲ್ನ ಮಾಹಿತಿ.
ಇತ್ತೀಚಿನ ಕಾನೂನು ಮೊಕದ್ದಮೆಯೊಂದು ಗೂಗಲ್ ರೆಗ್ಯುಲರ್ ಫೀಚರ್ ಹಾಗೂ ಪ್ರೈವೇಟ್ ಬ್ರೌಸಿಂಗ್ನಲ್ಲಿನ ಎಲ್ಲಾ ಡಾಟಾವನ್ನು ಸ್ಟೋರ್ ಮಾಡುತ್ತದೆ. ಅದನ್ನು ತನ್ನ ಲಾಭಕ್ಕಾಗಿ ಬಳಕೆ ಮಾಡುತ್ತದೆ ಎಂದು ಹೇಳಿದೆ.
ಈ ಹಿನ್ನೆಲೆ ಗೂಗಲ್ ಸಹ ಒಂದು ಮಾಹಿತಿಯನ್ನು ಹೊರಹಾಕಿದ್ದು, ‘Incognito Tab ನಲ್ಲಿ ಪ್ರತಿ ಬಾರಿ ತೆರೆದ ಪ್ರತಿ ವೆಬ್ಸೈಟ್ಗಳು ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುವ, ಬಳಕೆಯ ಸಂದರ್ಭದಲ್ಲಿ ಬ್ರೌಸಿಂಗ್ ಆಕ್ಟಿವಿಟಿಗಳನ್ನು ಕಲೆಹಾಕುವ ಎಲ್ಲ ಸಾಧ್ಯತೆಗಳನ್ನು ಹೊಂದಿವೆ’ ಎಂದು ಹೇಳಿದೆ. ಈ ಹೇಳಿಕೆಯ ಮೂಲಕ ತಿಳಿಯಬೇಕಾದ ಮಾಹಿತಿ ಎಂದರೆ ನಿಮ್ಮ ಮೊಬೈಲ್ನ ಬ್ರೌಸರ್ನಲ್ಲಿ ನೀವು ಸರ್ಚ್ ಮಾಡಿದ್ದು, ವೀಕ್ಷಿಸಿದ್ದು ಎಲ್ಲವೂ ಸಹ ನೀವು ಕೊನೆಗೊಳಿಸಿದ ನಂತರ, ನಿಮ್ಮದೇ ಮೊಬೈಲ್ನಲ್ಲಿ ಇನ್ನೊಬ್ಬರು ಸರ್ಚ್ ಹಿಸ್ಟರಿ ತೆಗೆಯಲು ಸಾಧ್ಯವಿಲ್ಲ. ಆದರೆ ನೀವು ಯಾವ ವೆಬ್ಸೈಟ್ಗೆ ಭೇಟಿ ನೀಡಿರುತ್ತೀರೋ ಅವುಗಳು ನಿಮ್ಮ ಸರ್ಚ್ ಡಾಟಾ, ಇತರೆ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡುವ ಎಲ್ಲ ಸಾಧ್ಯತೆಗಳನ್ನು ಹೊಂದಿವೆ