ಬಳ್ಳಾರಿ: ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಭೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ವಿಮ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಒಂದೇ ಬೆಡ್ನಲ್ಲಿ ಮೂರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಕಂಡು ಅಧಿಕಾರಿಗಳಿಗೆ ಸರಿಪಡಿಸಲು ಸೂಚನೆ ನೀಡಲಾಗಿತ್ತು. ಈಗ ಒಂದು ಬೆಡ್ನಲ್ಲಿ ಒಂದೇ ಮಗುವಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ತೃಪ್ತಿ ತಂದಿದೆ ಎಂದರು.
ಎನ್ಆರ್ ಸಿ ಘಟಕ, ಆರ್ ಬಿಎಸ್ ಹೆಚ್ ತಂಡ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತೀರಾ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸರ್ವೇ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಎರಡು ಆರ್ ಬಿಎಸ್ ಹೆಚ್ ತಂಡಗಳನ್ನು ರಚಿಸಿ, ಮಕ್ಕಳ ದಾಖಲೆ ಮಾಡುವುದಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು. ಕಳೆದ ಎರಡು ಮೂರು ವರ್ಷಗಳಿಂದ ಪೌಷ್ಠಿಕ ಪುರ್ನಚೇತನ ಘಟಕದಲ್ಲಿ ಕೆಲಸ ನಿರ್ವಹಿಸುವ ತಾಯಂದಿರಿಗೆ ದಿನಗೂಲಿ ಅನುದಾನ ನೀಡಿಲ್ಲ,
ತಾಯಂದಿಯರು ಬಡವರು ಇರುತ್ತಾರೆ. ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು 4೦೦ ಜನರ ದಿನಗೂಲಿ ಅನುದಾನಕ್ಕೆ ಕ್ರಮವಹಿಸಬೇಕು ಎಂದರು. ನಂತರ, ವಿಮ್ಸ್ನ ಬಾಣಂತಿಯರ ಘಟಕಗಳಲ್ಲಿ ಶೌಚಾಯಲ ಮತ್ತು ಸ್ನಾನದ ಕೊಠಡಿಗಳ ನಿರ್ವಹಣೆ ಇಲ್ಲ. ವಿಮ್ಸ್ ನಿರ್ದೇಶಕರು ಕ್ರಮ ವಹಿಸಬೇಕಾಗಿದೆ. ಬಾಣಂತಿಯರಿಗೆ ಬೀಸಿ ನೀರಿನ ಸೌಕರ್ಯ ಇಲ್ಲ, ಬಿಸಿ ನೀರಿನ ಸೌಕರ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ.