ಬೆಂಗಳೂರು: ಮಿನಿ ಹರಾಜಿನಲ್ಲಿ ತಂಡಕ್ಕೆ ಅವಶ್ಯಕತೆ ಇದ್ದ ಆಟಗಾರರನ್ನು ಖರೀದಿಸಿ ಎಲ್ಲ ವಿಭಾಗಗಳನ್ನು ಬಲಿಷ್ಠಗೊಳಿಸಿದ್ದೇವೆ ಎಂದು ಪಂಟರ್ ಸಂತಸ ವ್ಯಕ್ತಪಡಿಸಿದ್ದಾರೆ.ಇಂಗ್ಲೆಂಡ್ ತಂಡದ ಯುವ ಆಲ್ರೌಂಡರ್ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.
ಡಿಸೆಂಬರ್ 19 (ಮಂಗಳವಾರ) ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಜಾಣ್ಮೆ ನಡೆ ಪ್ರದರ್ಶಿಸಿ 9 ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಮಿನಿ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ 10 ಆಟಗಾರರನ್ನು ಬಿಡುಗಡೆಗೊಳಿಸಿತ್ತು. 2023ರ ಐಪಿಎಲ್ ಆವೃತ್ತಿಯ ಪಾಯಿಂಟ್ಸ್ ಟೇಬಲ್ನಲ್ಲಿ ಡಿಸಿ 9ನೇ ಸ್ಥಾನವನ್ನು ಅಲಂಕರಿಸಿತ್ತು.
ಮಿನಿ ಹರಾಜಿನಲ್ಲಿ ತಂಡಕ್ಕೆ ಬೇಕಾಗಿದ್ದ ಆಟಗಾರರನ್ನು ಖರೀದಿಸಿ ಎಲ್ಲ ವಿಭಾಗಗಳನ್ನು ಬಲಿಷ್ಠಗೊಳಿಸಿದ್ದೇವೆ. ಅಲ್ಲದೆ ಫ್ರಾಂಚೈಸಿಗೆ 10 ಕೋಟಿವರೆಗೂ ಹಣವನ್ನು ಉಳಿಸಿದ್ದೇವೆ. ನಮ್ಮ ಈ ನಡೆಯಿಂದ ಫ್ರಾಂಚೈಸಿ ತುಂಬಾ ಸಂತಸಪಟ್ಟಿದೆ. ನಾವು ಬಯಸಿದಂತೆ ಶೇ.90 ರಷ್ಟು ನಮಗೆ ಬೇಕಾಗಿದ್ದ ಅವಶ್ಯಕತೆಯನ್ನು ಪೂರೈಸಿಕೊಂಡಿದ್ದೇವೆ. ಮಿನಿ ಹರಾಜಿನಲ್ಲಿ ನಾವು ಉತ್ತಮ ಕೆಲಸ ಮಾಡಿದ್ದೇವೆ,” ಎಂದು ತಿಳಿಸಿದ್ದಾರೆ.
“ಹ್ಯಾರಿ ಬ್ರೂಕ್ ಖರೀದಿಯಿಂದ ನಾನು ಸಾಕಷ್ಟು ಸಂತಸಗೊಂಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ ಅತ್ಯಂತ ಬುದ್ಧಿವಂತಿಕೆಯ ಕ್ರಿಕೆಟಿಗ ಎಂಬುದು ನನ್ನ ಭಾವನೆ. ಆತನ ಖರೀದಿಗೆ ನಾವು ಮೊದಲ ಪ್ರಾಶಸ್ತ್ಯ ನೀಡಿದ್ದೆವು. ಆತನನ್ನು ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮೊತ್ತಕ್ಕೆ ಖರೀದಿಸಿದ್ದೇವೆ. ಆತನೊಂದಿಗೆ ಕೆಲಸ ಮಾಡಲು ನನಗೆ ನಿಜಕ್ಕೂ ಸಂತೋಷವಾಗುತ್ತದೆ,” ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.