2024ರ ಐಪಿಎಲ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಅವರನ್ನು ಇಂಪ್ಯಾಕ್ಟ್ ಪ್ಲೆಯರ್ ರೂಪದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
17ನೇ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಹರ್ಷಲ್ ಪಟೇಲ್ (11.75 ಕೋಟಿ) ಹಾಗೂ ಕ್ರಿಸ್ ವೋಕ್ಸ್ (4.2 ಕೋಟಿ) ಅವರನ್ನು ಖರೀದಿಸಿ ವೇಗದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.
2024ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಹರ್ಷಲ್ ಪಟೇಲ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ಖರೀದಿಸಿದ ನಂತರ ಸಂಜಯ್ ಬಾಂಗರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕ್ರಿಸ್ ವೋಕ್ಸ್ ಅವರು ಕಗಿಸೊ ರಬಾಡ ಹಾಗೂ ಸ್ಯಾಮ್ ಕರನ್ ಅವರೊಂದಿಗೆ ವೇಗದ ಬಲವನ್ನು ಹೆಚ್ಚಿಸಿದ್ದಾರೆ. ಟೀಮ್ ಇಂಡಿಯಾದ ವೇಗದ ಬೌಲರ್ ಕೂಡ ಅಪಾರ ಮೌಲ್ಯ ತಂದುಕೊಡಲಿದ್ದಾರೆ. ಹರ್ಷಲ್ ಪಟೇಲ್ ಅವರು ಮಧ್ಯಮ ಹಾಗೂ ಡೆತ್ ಓವರ್ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಾರೆ. ಅವರನ್ನು ತಂಡದಲ್ಲಿ ಇಂಪ್ಯಾಕ್ಟ್ ಪ್ಲೆಯರ್ ರೂಪದಲ್ಲಿ ಬಳಸಿಕೊಳ್ಳಲು ನಮಗೆ ಉತ್ತಮ ಆಯ್ಕೆಯಾಗಿದ್ದಾರೆ. ಕ್ರಿಸ್ ವೋಕ್ಸ್ ಹಾಗೂ ಹರ್ಷಲ್ ಪಟೇಲ್ ಖರೀದಿಗೆ ಇದ್ದ ಪ್ರಮುಖ ಕಾರಣವೇ ಇದು,” ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.