ಚಳಿಗಾಲದಲ್ಲಿ ಶುಷ್ಕ ಚರ್ಮವೇ ಒಂದು ದೊಡ್ಡ ಸಮಸ್ಯೆ. ಯಾವಾಗಲೂ ಚರ್ಮವನ್ನು ಮಾಯಿಶ್ಚರೈಸರ್ ಆಗಿಡಲು ದುಬಾರಿ ಕ್ರೀಮ್ಗಳನ್ನು ಸಹ ಬಳಕೆ ಮಾಡುತ್ತಿದ್ದಾರೆ.
ಆದರೆ, ಹಣದ ಕೊರತೆ ಎದುರಿಸುವವರು ಸುಲಭವಾಗಿ ದೊರೆಯುವ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಇದು ಚರ್ಮಕ್ಕೆ ಒಳ್ಳೆಯದೇ ಎಂಬುದರ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.
ಈ ಚಳಿಗಾಲದಲ್ಲಿ ಮಲಗುವ ಮುನ್ನ ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಎರಡೂ ಕೈಗಳ ನಡುವೆ ಇಟ್ಟು ಚೆನ್ನಾಗಿ ಉಜ್ಜಿ, ಸ್ವಲ್ಪ ಬಿಸಿಯಾದ ನಂತರ, ನಿಮ್ಮ ಕೈಗಳನ್ನು ನಿಮ್ಮ ಮುಖದ ಮೇಲೆ ಇರಿಸಿ ಮತ್ತು ಮೃದುವಾಗಿ ಮಸಾಜ್ ಮಾಡಿ. ಪ್ರತಿದಿನ ರಾತ್ರಿ ಈ ರೀತಿ ಮಸಾಜ್ ಮಾಡುವುದರಿಂದ ರಾತ್ರಿಯಿಡೀ ನಿಮ್ಮ ಮುಖವು ತೇವಾಂಶದಿಂದ ಕೂಡಿರುತ್ತದೆ.
ತೆಂಗಿನಎಣ್ಣೆಯಲ್ಲಿ ಫ್ಯಾಟಿ ಆಯಸಿಡ್ಗಳು ಮತ್ತು ಆಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ರಾತ್ರಿ ತೆಂಗಿನ ಎಣ್ಣೆ ಹಚ್ಚುವುದರಿಂದ ಎಲ್ಲವನ್ನು ನಮ್ಮ ಚರ್ಮ ಹೀರಿಕೊಳ್ಳುತ್ತದೆ. ಇದು ಯಾವುದೇ ಕಾರಣಕ್ಕೂ ಮೊಡವೆಗಳಿಗೆ ಕಾರಣವಾಗುವುದಿಲ್ಲ. ಮಸಾಜ್ ಮಾಡುವುದರಿಂದ ಮುಖದಲ್ಲಿ ರಕ್ತಪರಿಚಲನೆ ಸರಾಗವಾಗುತ್ತದೆ. ಇದರಿಂದ ಮುಖದ ಚರ್ಮ ನೈಸರ್ಗಿಕವಾಗಿ ಹೊಳೆಯುತ್ತದೆ.
ಯಾರು ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೋ ಅಂಥವರು ತೆಂಗಿನ ಎಣ್ಣೆಯನ್ನು ರಾತ್ರಿಯಲ್ಲಿ ಖಂಡಿತವಾಗಿ ಬಳಸಬೇಕು. ಇದು ಚರ್ಮವನ್ನು ಆಳದಿಂದ ತೇವಗೊಳಿಸುತ್ತದೆ. ಏಕೆಂದರೆ ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಇದಲ್ಲದೆ, ಇದು ಯಾವುದೇ ಕೃತಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ.
ಇನ್ನು ತೆಂಗಿನ ಎಣ್ಣೆಯಲ್ಲಿ ಉರಿಯೂತ ವಿರೋಧಿ ಅಂಶಗಳಿವೆ. ಹೀಗಾಗಿ ಮೊಡವೆಯಿಂದಾಗುವ ಊತವನ್ನು ಕಡಿಮೆ ಮಾಡುತ್ತದೆ. ಮೊಡವೆಗಳ ನಿಯಂತ್ರಣ ಮತ್ತು ಮೊಡವೆ ಗಾಯದ ಕಲೆಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ, ಬ್ಲ್ಯಾಕ್ಹೆಡ್ಸ್, ವೈಟ್ಹೆಡ್ಸ್ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.
ಶೇ. 20 ರಷ್ಟು ಅಲ್ಟ್ರಾವೈಲೆಟ್ ಕಿರಣಗಳನ್ನು ತಡೆಯುವ ಶಕ್ತಿ ತೆಂಗಿನ ಎಣ್ಣೆಗಿದೆ. ಆದ್ದರಿಂದ ಇದು ಬೇಗ ವಯಸ್ಸಾದಂತೆ ಕಾಣುವ ಸಮಸ್ಯೆಯನ್ನು ತಡೆಯುವತ್ತದೆ. ಅಲ್ಲದೆ, ತೆಂಗಿನಎಣ್ಣೆಯನ್ನು ನೈಸರ್ಗಿಕ ಮೇಕಪ್ ರಿಮೂವರ್ ಆಗಿಯೂ ಬಳಸಬಹುದು.