ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ನಟಿ ರಚಿತಾ ಇದೀಗ ಸ್ವಿಜರ್ಲ್ಯಾಂಡ್ಗೆ ಹಾರಿದ್ದಾರೆ. ಸ್ವಿಸ್ ಟ್ರಡಿಷನಲ್ ಡ್ರೆಸ್ನಲ್ಲಿ ರಚಿತಾ ರಾಮ್ ಮಿಂಚಿದ್ದಾರೆ.
ಸಂಜು ವೆಡ್ಸ್ ಗೀತಾ’ ಪಾರ್ಟ್ 2 (Sanju Weds Geetha 2) ಸಿನಿಮಾದ ಚಿತ್ರೀಕರಣಕ್ಕಾಗಿ ಸ್ವಿಜರ್ಲ್ಯಾಂಡ್ಗೆ ರಚಿತಾ & ಟೀಮ್ ಹೋಗಿದ್ದಾರೆ. ಸುಂದರ ತಾಣದಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ
ನಾಗಶೇಖರ್ ನಿರ್ದೇಶನದ ಸಿನಿಮಾದಲ್ಲಿ ‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಮ್ಯಾ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಸಕ್ಸಸ್ ಕಂಡಿತ್ತು. ಈಗ ಪಾರ್ಟ್ 2ನಲ್ಲಿ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ.