ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬೋ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದೇ ಡಿ.22ಕ್ಕೆ ಸಲಾರ್ ಚಿತ್ರ ರಿಲೀಸ್ ಆಗ್ತಿದೆ. ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ (Hombale Films) ತನ್ನ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದೆ. ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಚಿತ್ರವನ್ನು ಘೋಷಿಸಿದ್ದ ಹೊಂಬಾಳೆ ಸಂಸ್ಥೆ ಇದೀಗ ಚಿತ್ರದ ಬಗ್ಗೆ ಹೊಸ ಮಾಹಿತಿ ತಿಳಿಸಿದೆ.
ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಹೊಂಬಾಳೆ ಸಂಸ್ಥೆ ‘ರಘು ತಾತ’ ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಮಹಾನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಸುಮನ್ ಕುಮಾರ್ ರಚಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ತರಕಾರಿ ಮಾರುಕಟ್ಟೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಸಾಗಿಸುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಪೋಸ್ಟರ್ನಲ್ಲಿ ಕೀರ್ತಿ ಸುರೇಶ್ ಅವರ ಚಿತ್ರ ಕಂಡು ಬಂದಿದೆ. ಹಿಂದಿ ಮತ್ತು ತಮಿಳಿನಲ್ಲಿ ಹಿನ್ನಲೆ ಧ್ವನಿ ಮೂಡಿಬಂದಿದೆ. ವಿಡಿಯೋ ಕೊನೆಯಲ್ಲಿ ಕಮಿಂಗ್ ಸೂನ್ ಎನ್ನುವ ಸಂದೇಶ ಮೂಡಿ ಬಂದಿದೆ. ಆದರೆ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಚಿತ್ರದ ಸಣ್ಣ ತುಣುಕು ರಿವೀಲ್ ಮಾಡುವ ಮೂಲಕ ಸಿನಿಮಾ ರಿಲೀಸ್ ಬಗ್ಗೆ ಮುನ್ಸೂಚನೆ ನೀಡಿದೆ.