ತುಮಕೂರು : ಜಿಲ್ಲೆಯ ಮಧುಗಿರಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ನಡೆಸುತ್ತಿದ್ದು ಮಧುಗಿರಿ ಪಟ್ಟಣದ ವಿ.ಆರ್.ಎಸ್.ಟಿ ಮೊಬೈಲ್ ಅಂಗಡಿಯಲ್ಲಿ ಈ ಕೃತ್ಯವನ್ನು ನಡೆಸಲಾಗುತ್ತಿತ್ತು.
ಮೊಬೈಲ್ ಖರೀದಿಗೆ ಬಂದಿದ್ದ ಮೂವರು ಹುಡುಗರು 10,500 ಬೆಲೆಯ ಮೊಬೈಲ್ ಖರೀದಿ ಮಾಡಿದ್ದು ನಂತರ 500 ರೂಪಾಯಿ ಮುಖ ಬೆಲೆಯ 21 ನೋಟು ನೀಡಿದ್ದ ಯುವಕರು ಆದರೆ ನೋಟುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹುಡುಗರನ್ನು ವಿಚಾರಿಸಿದಾಗ ಸ್ಥಳದಿಂದ ಪರಾರಿಯಾಗಿದ್ದು ಆ ತಕ್ಷಣ ಮೊಬೈಲ್ ಅಂಗಡಿ ಮಾಲೀಕ ನವೀನ್ ಖೋಟಾ ನೋಟುಗಳನ್ನು ಪೊಲೀಸರಿಗೊಪ್ಪಿಸಿ ದೂರು ನೀಡಿದ್ದಾರೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಹುಡುಗರನ್ನು ಹುಡುಕುವ ಪ್ರಯತ್ನದಲ್ಲಿದ್ದು ತನಿಖೆ ಮುಂದುವರೆಸಿದ್ದಾರೆ.