ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ (IPL 2024 Auction) ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಬರೋಬ್ಬರಿ 20.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ.
ಈ ಮಾರಾಟದೊಂದಿಗೆ ಐಪಿಎಲ್ ಆಕ್ಷನ್ ಇತಿಹಾಸದಲ್ಲಿ ಮಿಚೆಲ್ ಸ್ಟಾರ್ಕ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಸ್ಟಾರ್ಕ್ ಹೆಸರು ಹರಾಜಿನಲ್ಲಿ ಬರುವ ಮುನ್ನ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ 20.5 ಕೋಟಿ ರೂ. ನೀಡಿ ಖರೀದಿಸಿತ್ತು. ಈ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಕೆಲವೇ ಸಮಯಗಳಲ್ಲಿ ನುಚ್ಚು ನೂರು ಮಾಡಿದರು. ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಆಟಗಾರರ ಟಾಪ್ 10 ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಐಪಿಎಲ್ ಇತಿಹಾಸದ 10 ದುಬಾರಿ ಆಟಗಾರರು
01. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 24.75 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್) (2024)
02. ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) – 20.50 ಕೋಟಿ (ಸನ್ ರೈಸರ್ಸ್ ಹೈದರಾಬಾದ್) (2024)
03. ಸ್ಯಾಮ್ ಕರ್ರಾನ್ (ಇಂಗ್ಲೆಂಡ್) – 18.50 ಕೋಟಿ (ಪಂಜಾಬ್ ಕಿಂಗ್ಸ್) (2023)
04. ಕ್ಯಾಮರೂನ್ ಗ್ರೀನ್ (ಆಸ್ಟ್ರೇಲಿಯಾ) – 17.50 ಕೋಟಿ (ಮುಂಬೈ ಇಂಡಿಯನ್ಸ್) (2023)
05. ಬೆನ್ ಸ್ಟೋಕ್ಸ್ (ಇಂಗ್ಲೆಂಡ್) – 16.25 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್) (2023)
06. ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ) – 16.25 ಕೋಟಿ (ರಾಜಸ್ಥಾನ್ ರಾಯಲ್ಸ್) (2021)
07. ಯುವರಾಜ್ ಸಿಂಗ್ (ಭಾರತ) – 16 ಕೋಟಿ (ದೆಹಲಿ ಡೇರ್ ಡೆವಿಲ್ಸ್) (2015)
08. ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) – 16 ಕೋಟಿ (ಲಕ್ನೋ ಸೂಪರ್ ಜೈಂಟ್ಸ್) (2023)
09. ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) – 15.50 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್) (2020)
10. ಇಶಾನ್ ಕಿಶನ್ (ಭಾರತ) – 15.25 ಕೋಟಿ (ಮುಂಬೈ ಇಂಡಿಯನ್ಸ್) (2022)