ನವದೆಹಲಿ: ಭಾರೀ, ಟೀಕೆ ಆಕ್ರೋಶದ ಬೆನ್ನಲ್ಲೇ ಇದೀಗ ಬಿಜೆಪಿಯ (BJP) ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ (L.K Advani) ಹಾಗೂ ಮುರಳಿ ಮನೋಹರ್ ಜೋಶಿಯವರಿಗೆ (Murali Manohar Joshi) ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.
ಅಯೋಧ್ಯೆ ರಾಮಮಂದಿರ (Ramamandir Ayodhya) ಚಳವಳಿಗೆ ಉಸಿರು ನೀಡಿದ್ದು, ಚಳವಳಿ ತೀವ್ರಗೊಳ್ಳುವಂತೆ ಮಾಡಿದವರಲ್ಲಿ ಬಿಜೆಪಿಯ ಎಲ್ಕೆ ಅಡ್ವಾಣಿ, ಮುರಳಿಮನೋಹರ್ ಜೋಶಿ ಪ್ರಮುಖರು. ಆದರೆ ರಾಮಮಂದಿರ ಟ್ರಸ್ಟ್ ಅವರನ್ನೇ ಕಡೆಗಣಿಸಿತ್ತು.
ಅಯೋಧ್ಯೆ ರಾಮಮಂದಿರ (Ramamandir Ayodhya) ಚಳವಳಿಗೆ ಉಸಿರು ನೀಡಿದ್ದು, ಚಳವಳಿ ತೀವ್ರಗೊಳ್ಳುವಂತೆ ಮಾಡಿದವರಲ್ಲಿ ಬಿಜೆಪಿಯ ಎಲ್ಕೆ ಅಡ್ವಾಣಿ, ಮುರಳಿಮನೋಹರ್ ಜೋಶಿ ಪ್ರಮುಖರು. ಆದರೆ ರಾಮಮಂದಿರ ಟ್ರಸ್ಟ್ ಅವರನ್ನೇ ಕಡೆಗಣಿಸಿತ್ತು
ಆರೋಗ್ಯ ಮತ್ತು ವಯಸ್ಸಿನ ಕಾರಣ ನೀಡಿ ಈ ನಾಯಕರನ್ನೇ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರಬೇಡಿ ಎಂದು ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಮನವಿ ಮಾಡಿದ್ದರು. ಇದಕ್ಕೆ ಭಾರೀ ಟೀಕೆ, ಆಕ್ರೋಶಗಳು ವ್ಯಕ್ತವಾಯಿತು. ಈ ಬೆನ್ನಲ್ಲೇ ವಿಹೆಚ್ಪಿ ಡ್ಯಾಮೇಜ್ ಕಂಟ್ರೋಲ್ಗೆ ಇಳಿದಿದೆ.
ಇಂದು ಅಡ್ವಾಣಿ ಮತ್ತು ಜೋಶಿ ನಿವಾಸಗಳಿಗೆ ಭೇಟಿ ನೀಡಿದ ವಿಹೆಚ್ಪಿ ನಾಯಕರು, ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಡ್ವಾಣಿ ಮತ್ತು ಜೋಶಿ, ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.