ಬೆಂಗಳೂರು:- ನಗರದ ಟಿ.ಸಿ. ಪಾಳ್ಯ ಜಂಕ್ಷನ್ ಬಳಿ ಸಂಚಾರ ದಟ್ಟಣೆ ನಿವಾರಿಸಲು ಪ್ರಾಯೋಗಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಟಿ.ಸಿ. ಪಾಳ್ಯದ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವವರು ಒ.ಎಂ. ರಸ್ತೆ ಮಾರ್ಗವಾಗಿ ಭಟ್ಟರಹಳ್ಳಿ ಸಿಗ್ನಲ್ನಲ್ಲಿ ತಿರುವು ಪಡೆದು ಮುಂದಕ್ಕೆ ಸಂಚರಿಸಬೇಕು.
ಹೊಸಕೋಟೆ ಕಡೆಯಿಂದ ಟಿಸಿ ಪಾಳ್ಯ ಕಡೆಗೆ ಸಂಚರಿಸುವವರು ಕೆಆರ್ ಪುರ ಸರ್ಕಾರಿ ಕಾಲೇಜು ಜಂಕ್ಷನ್ ಬಳಿ ತಿರುವು ಪಡೆದುಕೊಳ್ಳಬೇಕು. ಮೇಡಹಳ್ಳಿ ಕಡೆಯಿಂದ ಟಿಸಿ ಪಾಳ್ಯ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನ ಸವಾರರು ಟಿಸಿ ಪಾಳ್ಯ ಜಂಕ್ಷನ್ಗಿಂತ ಮೊದಲು ಸಿಗುವ ಮೀಡಿಯನ್ ಓಪನ್ ಬಳಿ ಬಂದು ಒಎಂ ರಸ್ತೆ ಮೂಲಕ ಮುಂದಕ್ಕೆ ಚಲಿಸಬೇಕು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.