ಆಧುನಿಕ ಜೀವನದ ಅವಿಭಾಜ್ಯ ಅಂಗವಾದ ಟೆಲಿವಿಶನ್ ಅನ್ನು ಮನೆಯಲ್ಲಿ ಯಾವ ಕೋಣೆಯ, ಯಾವ ದಿಕ್ಕಿನಲ್ಲಿಡಬೇಕು ಎಂಬುದೂ ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯವಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲೆಂದರಲ್ಲಿ ಟಿವಿ ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಮನೆ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿ, ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಾರೆ ಎನ್ನಬಹುದು. ಹಾಗಿದ್ದರೆ ಮನೆಯಲ್ಲಿ ಟಿವಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಟಿ.ವಿ ಇಡಲು ಆಗ್ನೇಯ ಅಥವಾ ಪೂರ್ವ ದಿಕ್ಕು ಸರಿಯಾದ ದಿಕ್ಕು. ಈ ದಿಕ್ಕಿನಲ್ಲಿ ಟಿ.ವಿಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ ಎಂದು ನಂಬಲಾಗಿದೆ.
ವಾಸ್ತು ಪ್ರಕಾರ ಟಿ.ವಿ ನೋಡುವಾಗ ಪೂರ್ವಕ್ಕೆ ಮುಖ ಮಾಡಬೇಕು. ಅಲ್ಲದೆ, ಮನೆಯ ಪ್ರವೇಶದ್ವಾರದ ಮುಂದೆ ಟಿವಿಯನ್ನು ಎಂದಿಗೂ ಇಡಬೇಡಿ ಎಂಬುದನ್ನ ನೆನಪಿಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಜಗಳ ನಡೆದು, ಕುಟುಂಬ ಸದಸ್ಯರ ನಡುವೆ ಕಲಹದ ವಾತಾವರಣ ನಿರ್ಮಾಣವಾಗುತ್ತದೆ. ಇನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಟಿ.ವಿಯನ್ನು ಎಂದಿಗೂ ಇಡಬೇಡಿ. ಈ ದಿಕ್ಕಿನಲ್ಲಿ ಟಿವಿಯನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಯ ಮಾರ್ಗವನ್ನು ನಿರ್ಬಂಧಿಸುತ್ತದೆ. ಮನೆಯಲ್ಲಿ ನಕಾರಾತ್ಮಕತೆ ತುಂಬಿಕೊಳ್ಳುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ.. ಮಲಗುವ ಕೋಣೆಯಲ್ಲಿ ಟಿವಿ ಇಡುವುದು ಒಳ್ಳೆಯದಲ್ಲ. ನಿಮ್ಮ ಮಲಗುವ ಕೋಣೆಯಲ್ಲಿ ಟಿ.ವಿ ಹಾಕಲು ನೀವು ನಿರ್ಧರಿಸಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಮಲಗುವ ಕೋಣೆಯಲ್ಲಿ ಟಿ.ವಿಯನ್ನು ಆಗ್ನೇಯ ದಿಕ್ಕಿನಲ್ಲಿ ಅಂದರೆ ಆಗ್ನೇಯ ಕೋನದಲ್ಲಿ ಇಡಬೇಕು. ಅಲ್ಲದೆ ಮಲಗುವ ಕೋಣೆಯ ಮಧ್ಯದಲ್ಲಿ ಟಿವಿ ಇರಬಾರದು. ಏಕೆಂದರೆ ಇದು ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಟಿವಿ ಅಳವಡಿಸುವುದು, ಅದರ ಬಳಕೆ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ಮಾಹಿತಿ ನೀಡಲಾಗಿದೆ. ವಾಸ್ತು ಪ್ರಕಾರ ಟಿವಿ ಯಾವಾಗಲೂ ಸ್ವಚ್ಛವಾಗಿರಬೇಕು. ಧೂಳು ಸಂಗ್ರಹವಾಗದಂತೆ ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಹೀಗೆ ಮಾಡದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿಯಿಂದ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನ ಮರೆಯಬೇಡಿ.