ಹುಬ್ಬಳ್ಳಿ: ನಗರದ ಹುಬ್ಬಳ್ಳಿಯ ಘಂಟಿಕೇರಿ ಓಣಿಯಲ್ಲಿ ಮೋದಿ ಸರ್ಕಾರ ಗ್ಯಾರಂಟಿ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಸಸಿಗೆ ನೀರು ಹಾಕುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯನ್ನು ವಿಡಿಯೋ ಮಾಹಿತಿ ನೀಡುವ ವಾಹನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿರವರ ಕನಸು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಸವಲತ್ತುಗಳು ದೊರಕಬೇಕು ಎಂಬುದು. ಈ ದೇಶದ ಪ್ರತಿ ಹಳ್ಳಿಯೂ ಅಭಿವೃದ್ಧಿಯಾದರೆ ಮಾತ್ರವೇ ದೇಶ ಅಭಿವೃದ್ಧಿಯಾಗಲು ಸಾಧ್ಯ. ಈ ಪರಿಕಲ್ಪನೆಯನ್ನು ಇಟ್ಟುಕೊಂಡು ಮೋದಿ ರವರು ಕಳೆದ ಒಂಬತ್ತುವರೆ ವರ್ಷಗಳಿಂದ ನಿರಂತರವಾಗಿ ತೊಡಗಿದ್ದಾರೆ, ಸ್ವಾತಂತ್ರ್ಯಬಂದ 58 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 3 ಕೋಟಿ ಆವಾಜ್ ಯೋಜನೆ ನೀಡಿದ್ದಾರೆ.
ಆದರೆ ನರೇಂದ್ರ ಮೋದಿ ಸರ್ಕಾರದಿಂದ ಕೇವಲ ಒಂಬತ್ತು ವರ್ಷಗಳಲ್ಲಿ 3,500 ಪ್ರಧಾನ ಮಂತ್ರಿ ಆವಾಜ್ ಯೋಜನೆ ನೀಡಲಾಗಿದೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬಡವನಿಗೆ ಶೇ.15 ರಷ್ಟು ಮಾತ್ರ ತಲುಪುತ್ತಿತ್ತು. ಆದರೆ, ಮೋದಿ ಸರ್ಕಾರದಲ್ಲಿ ನೂರಕ್ಕೇ ನೂರು ಬಡವನಿಗೆ ತಲುಪುತ್ತಿದೆ. ದೇಶದಲ್ಲಿ ಒಂಬತ್ತು ವರ್ಷದಲ್ಲಿ ವಿಮಾನ ಮತ್ತು ರೈಲ್ವೆ ನಿಲ್ದಾಣಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟದ ನಿರ್ಮಾಣ ಆಗಿದೆ. ಐಐಟಿ, ಮೆಡಿಕಲ್ ಕಾಲೇಜುಗಳ ಆರಂಭವಾಗಿವೆ. ದೇಶದ ಬಡವರ ಸಂಕಷ್ಟ, ರೈತರ ಸಮಸ್ಯೆಗಳನ್ನು ಅರಿತು ಪಿಎಂ ಕೃಷಿ ಸಮ್ಮಾನ್, ಫಸಲ್ ಬಿಮಾ, ರಸಾಯನಿಕ ಗೊಬ್ಬರದ ಸಬ್ಸಿಡಿ, ಪ್ರತಿ ಮನೆಗೂ ಶೌಚಾಲಯ, ಪಿಎಂ ಆವಾಜ್ ಯೋಜನೆ, ಉಜ್ವಲ ಯೋಜನೆಯಡಿ ಉಚಿತ ಅಡಿಗೆ ಅನಿಲ ಸಂಪರ್ಕ ನೀಡಲಾಗಿದೆ. ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೆ ತಲುಪಿಸುವ ಉದ್ದೇಶದಿಂದ ವಿಕಸಿತ್ ಭಾರತ ಸಂಕಲ್ಪ ಯಾತ್ರೆ ದೇಶಾದ್ಯಂತ ಮೋದಿ ಗ್ಯಾರಂಟಿ ಲಾಭವನ್ನು ಜನರು ಪಡೆಯಬೇಕು, ಮುಂದಿನ ದಿನಮಾನದಲ್ಲಿ ಭಾರತ ವಿಕಸಿತ ಮಾಡುವುದಕ್ಕೆ ಸಂಕಲ್ಪ ಮಾಡುವ ಪ್ರಮಾಣಿಸಲಾಯಿತು. ನಂತರ ಕೇಂದ್ರ ಸರ್ಕಾರದ ಯೋಜನೆಯನ್ನು ವಿಡಿಯೋ ಮೂಲಕ ಮಾಹಿತಿ ನೀಡುವ ವಾಹನದಲ್ಲಿ ವಿಡಿಯೋ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ, ಖ್ಯಾತ ನರರೋಗ ತಜ್ಞರಾದ ಡಾ ಕ್ರಾಂತಿ ಕಿರಣ , ಹಿರಿಯರಾದ ಗುರಯ್ಯ ಸಾಲಿಮಠ, ಬಸವರಾಜ ಜಾಬೀನ, ಮಾಧ್ಯಮ ಸಂಚಾಲಕ ಲಕ್ಷ್ಮೀಕಾಂತ ಘೋಡಕೆ, ನೀಲಕಂಠ ತಡಸದಮಠ, ಗಣೇಶ ಅಮರಾವತಿ ಪದ್ಮಾವತಿ ಚಿಗನಾಂಪಲ್ಲಿ, ಮದು ಉಪ್ಪಿನ, ಪೂಜಾ ರುದ್ರಾಪೂರ, ಶಿವಾನಂದ ಅಂಬಿಗೇರ ಹಾಗೂ ಘಂಟಿಕೇರಿ ಓಣಿ, ಅಗಸರ ಓಣಿ, ಬ್ಯಾಡಗೇರ ಓಣಿ, ಮಂಗಳವಾರ ಪೇಟೆ , ಚಲವಾದಿ ಓಣಿ , ಜೋಳದ ಓಣಿ ಬಾಗದ ಹಿರಿಯರು, ಯುವಕರು ಮಾತೆಯ ನೂರಾರು ಶಿಬಿರಾರ್ಥಿಗಳು ಹಾಗೂ ಉನಿಯನ್ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ , ಆಯುಷಮಾನ ಯೋಜನೆ ಸಿಬ್ಬಂದಿ, ಆವಾಸ್ ಯೋಜನೆ ಸಿಬ್ಬಂದಿ,ಆಧಾರ ಕಾರ್ಡ್ ನೊಂದಣಿ ಸಿಬ್ಬಂದಿ, ಉಜ್ವಲಾ ಯೋಜನೆ ಸಿಬ್ಬಂದಿ, ಆಶ್ರಯ ಸಮಿತಿ ಸಿಬ್ಬಂದಿ ಮುಂತಾದ ಯೋಜನೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.