ಬಾಗಲಕೋಟೆ: ಟಾಟಾ ಸಫಾರಿ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ ರೈತರೊಬ್ಬರು ಮೃತಪಟ್ಟ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಆಸ್ತಿ ವಿಚಾರವಾಗಿ ರೈತನನ್ನು ವಿಜಯಪುರದ ಜಲನಗರ ಠಾಣೆ ಕಾನ್ಸ್ಟೇಬಲ್ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.
ಡಿಸೆಂಬರ್ 5 ರಂದು ಬೆಳಗ್ಗೆ ಹತ್ತೂವರೆ ಸಮಯಕ್ಕೆ ಟಾಟಾ ಸಫಾರಿ ಬೈಕ್ ಮುಖಾಮುಖಿ ಡಿಕ್ಕಿಯಾಗಿ ರೈತ ಮಡ್ಡೆಸಾಬ್ ಗಲಗಲಿ (55) ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆದರೆ ಇದು ಅಪಘಾತವಲ್ಲ, ಆಸ್ತಿ ವಿಚಾರದಲ್ಲಿ ನಡೆದ ಕೊಲೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಹೆಬ್ಬೂರು ಪೊಲೀಸರ ಕಾರ್ಯಾಚರಣೆ: ಐದು ಪೊಲೀಸ್ ಠಾಣೆಗೆ ಬೇಕಿದ್ದ ಕಳ್ಳ ಅರೆಸ್ಟ್
ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಮೂರುವರೆ ಎಕರೆ ಜಮೀನು ವಿವಾದ ವಿಚಾರವಾಗಿ ಕಾನ್ಸ್ಟೇಬಲ್ ಮನ್ಸೂರ್ ಅಲಿ ಟಾಟಾ ಸಫಾರಿ ಕಾರಿನಿಂದ ಬೈಕಕ್ಗೆ ಡಿಕ್ಕಿ ಹೊಡೆದು ಮಡ್ಡೆಸಾಬ್ ಗಲಗಲಿ ಅವರನ್ನು ಕೊಲೆ ಮಾಡಿದ್ದನು. ಕೃತ್ಯ ಎಸಗಲು ಸಹೋದರ ಮೆಹಮೂದ್ ಕೈಜೋಡಿಸಿದ್ದಾನೆ.
ಸದ್ಯ, ಕೃತ್ಯದ ಸಮಯದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಿಸಿದ್ದ ಸಾವಳಗಿ ಠಾಣಾ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಮನ್ಸೂರ್ ಹಾಗೂ ಈತನ ಸಹೋದರ ಮೆಹಮೂದ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.