ರಾಯಚೂರು: ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ತಾಳಿ ಒಂದು ಕಡೆ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡಬಾರದು ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಅವರನ್ನ ಚುನವಾಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಾಯ್ತು, ಈಗ ಮತ್ತೆ ಗೆದ್ದಾಯ್ತು. ಈಗ ಸಿದ್ದರಾಮಯ್ಯ, ಡಿಕೆಶಿ ಕಡೆ ಒಲವಾಗಿದೆ.
ಬಿಜೆಪಿ ಅಲ್ಲಿ ಇಉವ ಹಾಗಿದ್ರೆ ಇರಿ, ಇಲ್ಲಾ ಹೋಗಿ. ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಅವರಿಂದ ವೈಯಕ್ತಿಕವಾಗಿ ನೊಂದಿದ್ದೇನೆ ಅಂತ ಈಶ್ವರಪ್ಪ ಹೇಳಿದರು. ಇದೇ ವೇಳೆ ಜ್ಞಾನವ್ಯಾಪಿಯ ವೈಜ್ಞಾನಿಕ ಸಮೀಕ್ಷೆಗೆ ಮುಸಲ್ಮಾನ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಎರಡು ಕನಸು ಈಗ ಈಡೇರಿದೆ. ಅಯೋದ್ಯಯಲ್ಲಿ ರಾಮಮಂದಿರ, ಆರ್ಟಿಕಲ್ 370 ಕಿತ್ತು ಬೀಸಾಕಾಯ್ತು ಎಂದರು.