2023 ವರ್ಷ ಹಲವು ತಾರೆಯರಿಗೆ ಸೂಪರ್ ಸ್ಪೆಷಲ್. ಯಾಕಂದ್ರೆ, ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೇ ವರ್ಷ. ಅದರಲ್ಲೂ ಸ್ಯಾಂಡಲ್ವುಡ್ನ ಹಲವು ಸ್ಟಾರ್ಗಳು 2023ರಲ್ಲೇ ವಿವಾಹ ಬಂಧನಕ್ಕೆ ಒಳಗಾದರು.
ಅಭಿಷೇಕ್ ಅಂಬರೀಶ್ – ಅವಿವಾ ಬಿದಪ್ಪ
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರ ಮದುವೆ ಅವಿವಾ ಬಿದಪ್ಪ ಜೊತೆ ನಡೆಯಿತು. ಅಭಿಷೇಕ್ – ಅವಿವಾ ವಿವಾಹಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಅಪಾರ ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಪೂಜಾ ಗಾಂಧಿ ವೆಡ್ಸ್ ವಿಜಯ್ ಘೋರ್ಪಡೆ
ಶಿಷ್ಯ’ ದೀಪಕ್ – ಬೃಂದಾ
‘ಶಿಷ್ಯ’, ‘ಮಾಗಡಿ’, ‘ಬೆಳ್ಳಿ’, ‘ಏಕ್ ಲವ್ ಯಾ’, ‘ವೀರಂ’ ಮುಂತಾದ ಸಿನಿಮಾಗಳಲ್ಲಿ ಮಿಂಚಿರುವ ನಟ ದೀಪಕ್ ಅವರ ಮದುವೆ ನಡೆಯಿತು. ಫ್ಯಾಶನ್ ಡಿಸೈನರ್ ಬೃಂದಾ ಅವರನ್ನ ನಟ ದೀಪಕ್ ವಿವಾಹವಾದರು. ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಬೆಂಗಳೂರಿನಲ್ಲಿ ದೀಪಕ್ – ಬೃಂದಾ ವಿವಾಹ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ನಡೆಯಿತು.
ತಪಸ್ವಿನಿ ಪೂಣಚ್ಚ – ರಕ್ಷತ್ ಮುತ್ತಣ್ಣ
‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಖ್ಯಾತಿಯ ತಪಸ್ವಿನಿ ಪೂಣಚ್ಚ ಅವರ ವಿವಾಹ ಇದೇ ವರ್ಷ ನಡೆಯಿತು. ರಕ್ಷತ್ ಮುತ್ತಣ್ಣ ಅವರನ್ನ ತಪಸ್ವಿನಿ ಪೂಣಚ್ಚ ಮದುವೆಯಾದರು. ಕೊಡವ ಸಂಪ್ರಾಯದಾಯದಂತೆ ತಪಸ್ವಿನಿ ಪೂಣಚ್ಚ – ರಕ್ಷತ್ ಮುತ್ತಣ್ಣ ಮದುವೆ ನಡೆದಿದೆ.
ಹರ್ಷಿಕಾ ಪೂಣಚ್ಚ – ಭುವನ್ ಪೊನ್ನಣ್ಣ
ಹಲವು ಸಿನಿಮಾಗಳಲ್ಲಿ ಮಿಂಚಿರುವ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಈ ವರ್ಷ ವಿವಾಹ ಬಂಧನಕ್ಕೆ ಒಳಗಾದರು. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಕೊಡವ ಸಂಪ್ರದಾಯದಂತೆಯೇ ಇವರು ವೈವಾಹಿಕ ಬದುಕಿಗೆ ನಾಂದಿ ಹಾಡಿದರು.
ವಾಸುಕಿ ವೈಭವ್ – ಬೃಂದಾ ವಿಕ್ರಮ್
‘ರಾಮಾ ರಾಮಾ ರೇ’ ಮುಂತಾದ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ‘ವಿಕ್ರಾಂತ್ ರೋಣ’, ‘ಟಗರು ಪಲ್ಯ’ ಸಿನಿಮಾಗಳಲ್ಲಿ ನಟಿಸಿರುವ ವಾಸುಕಿ ವೈಭವ್ ವೈವಾಹಿಕ ಜೀವನಕ್ಕೆ ನಾಂದಿ ಹಾಡಿದರು. ದೀರ್ಘಕಾಲದ ಗೆಳತಿ ಬೃಂದಾ ವಿಕ್ರಮ್ ಅವರನ್ನ ವಾಸುಕಿ ವೈಭವ್ ಮದುವೆಯಾದರು. ಬೃಂದಾ ವಿಕ್ರಮ್ ಕೂಡ ರಂಗಭೂಮಿಯಲ್ಲಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ತಪಸ್ವಿನಿ ಪೂಣಚ್ಚ – ರಕ್ಷತ್ ಮುತ್ತಣ್ಣ
‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಖ್ಯಾತಿಯ ತಪಸ್ವಿನಿ ಪೂಣಚ್ಚ ಅವರ ವಿವಾಹ ಇದೇ ವರ್ಷ ನಡೆಯಿತು. ರಕ್ಷತ್ ಮುತ್ತಣ್ಣ ಅವರನ್ನ ತಪಸ್ವಿನಿ ಪೂಣಚ್ಚ ಮದುವೆಯಾದರು. ಕೊಡವ ಸಂಪ್ರಾಯದಾಯದಂತೆ ತಪಸ್ವಿನಿ ಪೂಣಚ್ಚ – ರಕ್ಷತ್ ಮುತ್ತಣ್ಣ ಮದುವೆ ನಡೆದಿದೆ.