ಟರ್ಕಿ ಸಂಸದ ಹಸನ್ ಬಿಟ್ಮೆಜ್ ಭಾಷಣವನ್ನು ನೀಡುತ್ತಿದ್ದರು ಮತ್ತು ಬಿಟ್ಮೆಜ್ ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಬಲವಾಗಿ ಟೀಕಿಸುತ್ತಿದ್ದರು. ಅಲ್ಲಾನ ಕೋಪದಿಂದ ಯಾರೂ ತಪ್ಪಿಸಿಕೊಳ್ಳಲಾಗದು ಎಂದು ಹೇಳುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರೋಧ ಪಕ್ಷ ಫೆಲಿಸಿಟಿಯ ಸಂಸದ ಹಸನ್ ಅವರನ್ನು ಅಂಕಾರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ತಿಳಿಸಿದ್ದಾರೆ. ಕೈರೋದ ಅಲ್ ಅಜರ್ ವಿಶ್ವವಿದ್ಯಾನಿಲಯದ ಪದವೀಧರರಾದ ಬಿಟ್ಮೆಜ್ ಅವರು ಇಸ್ಲಾಮಿಕ್ ಯೂನಿಯನ್ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು.
Turkish MP Hasan Bitmez talks sh*t about Israel then gets a heart attack and dies on the spot after saying Israel “can’t escape the wrath of Allah.” pic.twitter.com/xryKoJzyg4
— Diliman Abdulkader (@D_abdulkader) December 14, 2023
ಈ ಹಿಂದೆ ಇಸ್ಲಾಮಿಕ್ ಸರ್ಕಾರೇತರ ಸಂಸ್ಥೆಗಳಿಗೆ ಕೆಲಸ ಮಾಡಿದ್ದರು ಎಂದು ಅವರ ಸಂಸತ್ತಿನ ಪರಿಚಯ ಪತ್ರದಲ್ಲಿ ತಿಳಿಸಲಾಗಿದೆ. ಬಿಟ್ಮೆಜ್ ಅವರಿಗೆ ಒಂದು ಮಗು ಇದೆ. ಇಸ್ರೇಲ್ ದುಷ್ಕೃತ್ಯಗಳು ಮತ್ತು ಹತ್ಯಾಕಾಂಡಗಳನ್ನು ಮಾಡಿದ್ದು ಇಡೀ ಮಾನವಕುಲವನ್ನು ನಾಚಿಕೆಗೇಡು ಮಾಡಿದೆ. ಅಲ್ಲಾ ಇಸ್ರೇಲ್ಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ಹೇಳುತ್ತಾ ಕುಸಿದುಬಿದ್ದಿದ್ದಾರೆ.