ಬಾಕ್ಸ್ ಆಫೀಸ್ ಸುಲ್ತಾನ್ ನಟ ದರ್ಶನ್ ತೂಗುದೀಪ ಅವರು ‘ಕಾಟೇರ’ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರೈತರ ದಿನದ ಅಂಗವಾಗಿ ಇದೇ ಡಿಸೆಂಬರ್ 23ರಂದು ಸಕ್ಕರೆ ನಾಡು ಮಂಡ್ಯದಲ್ಲಿ ‘ಕಾಟೇರ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಎಂದು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ರೈತರ ದಿನದಂದು ನಮ್ಮ #ಕಾಟೇರ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಮಂಡ್ಯದಲ್ಲಿ ನಡೆಯಲಿದೆ! ಈ ವಿಶೇಷ ದಿನದಂದೇ ನಮ್ಮ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ! 😊
ಸ್ಥಳ: ಬಾಯ್ಸ್ ಕಾಲೇಜ್ ಗ್ರೌಂಡ್, ಮಂಡ್ಯ
ದಿನಾಂಕ ಮತ್ತು ಸಮಯ: 23 ಡಿಸೆಂಬರ್, ಸಂಜೆ 5ರಿಂದಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ♥️🤗… pic.twitter.com/Hte5LKHJKc
— Darshan Thoogudeepa (@dasadarshan) December 19, 2023
ರೈತರ ದಿನದಂದು ನಮ್ಮ ಕಾಟೇರ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಂಡ್ಯದಲ್ಲಿ ನಡೆಯಲಿದೆ. ಈ ವಿಶೇಷ ದಿನದಂದೇ ‘ಕಾಟೇರ’ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ. ಮಂಡ್ಯದ ಬಾಯ್ಸ್ ಕಾಲೇಜ್ ಗ್ರೌಂಡ್ನಲ್ಲಿ ಸಂಜೆ 5 ಗಂಟೆಗೆ ಸಮಾರಂಭ ಶುರುವಾಗಲಿದೆ. ಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ಎಂದು ಪ್ರೀತಿಯಿಂದ ಆಹ್ವಾನ ನೀಡಿದ್ದಾರೆ.
‘ಕಾಟೇರ’ ಚಿತ್ರ ಈಗಾಗಲೇ ಎರಡು ಹಾಡು ಹಾಗೂ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ನಟ ದರ್ಶನ್ಗೆ ಜೊತೆಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅಭಿನಯಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೌಕ, ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತೊಮ್ಮೆ ದರ್ಶನ್ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಡಿಸೆಂಬರ್ 29ರಂದು ‘ಕಾಟೇರ’ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.