ಕಿರುತೆರೆಯ ನಟಿ ರಾಧಿಕಾ ರಾವ್ (Radhika Rao) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಕೆಲ ತಿಂಗಳುಗಳ ಹಿಂದೆ ರಾಧಿಕಾ, ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮುದ್ದಾದ ಮಗುವಿಗೆ ರಾಧಿಕಾ ನಾಮಕರಣ ಮಾಡಿದ್ದಾರೆ. ಚೆಂದದ ಫೋಟೋಶೂಟ್ ಶೇರ್ ಮಾಡಿಕೊಳ್ಳುವ ಮೂಲಕ ಮಗನ ಹೆಸರನ್ನ ನಟಿ ರಿವೀಲ್ ಮಾಡಿದ್ದಾರೆ.
ಜುಲೈನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ರಾವ್ (Radhika Rao) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ಚೆಂದದ ಫೋಟೋ ಶೇರ್ ಮಾಡಿದ್ದಾರೆ. ಮಗನಿಗೆ ‘ಅಗಸ್ತ್ಯ’ ಎಂದು ನಾಮಕರಣ ಮಾಡಿದ್ದಾರೆ.
ನಟಿ ರಾಧಿಕಾ ರಾವ್ ಅವರು 2020ರಲ್ಲಿ ಆಕರ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಕುಟುಂಬದವರ ಸಮ್ಮತಿ ಪಡೆದು ಮದುವೆ ಆಗಿದ್ದರು