ರಾಯಚೂರು: ಬಸನಗೌಡ ಪಾಟೀಲ್ ಯತ್ನಾಳ ಸ್ವಪಕ್ಷದ ವಿರುದ್ಧ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೇ ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಆನೇ ಇದ್ದಂತೆ ಗಜಾಂಬೀರ್ಯದಿಂದ ಹೋಗುವಾಗ ನಾಯಿ ನರಿಗಳು ಬೊಗಳುತ್ತೆ, ಯತ್ನಾಳ್ ಅವರದ್ದೇನು ಹೊಸದಲ್ಲ, ಯಾರನ್ನು ಬಿಟ್ಟಿದ್ದಾರೆ ಅವರು.
ಯಡಿಯೂರಪ್ಪ, ಬೊಮ್ಮಾಯಿ, ಶಟ್ಟರ್ ಅವರನ್ನೆ ಬಿಟ್ಟಿಲ್ಲ, ಇಂಥ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೆಜ್ ಆಗಿದೆ.. ನಮ್ಮಲ್ಲಿ ತುಂಬಾ ಗುಂಪುಗಾರಿಕೆ ಇಲ್ಲ, ನಾಲ್ಕು ಜನ ಮಾಡಿದ್ದನ್ನು ಗುಂಪುಗಾರಿಕೆ ಅಂದ್ರೆ ಒಪ್ಪಲ್ಲ. ಯತ್ನಾಳ್, ಬೆಲ್ಲದ್, ಸೋಮಣ್ಣ ಅವರಿಗಾದ ಅಸಮಧಾನ ಬಹಿರಂಗ ಹೊರಹಾಕಿದ್ದಾರೆ. ನಮ್ಮಲ್ಲಿ ತಪ್ಪಿದೆ, ಶಿಸ್ತು ಇಲ್ಲ, ರಿಪೇರಿ ಮಾಡೋಕೆ ಹಿರಿಯರಿದ್ದಾರೆ ಎಂದು ಯತ್ನಾಳ್ ಹೇಳಿಕೆ ವಿರುದ್ದ ಕೆ ಎಸ್ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.