ತುಮಕೂರು:- ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಅರೆಸ್ಟ್ ಮಾಡಲಾಗಿದೆ. ಇರ್ಫಾನ್ ಅಲಿಯಾಸ್ ಫಾಕ್ಸ್ ಬಂಧಿತ ಆರೋಪಿ.
ಇರ್ಫಾನ್ ಹೊನ್ನುಡಿಕೆ ಬಳಿ ಅನುಮಾನಾಸ್ಪದವಾಗಿ ಬೈಕ್ನಲ್ಲಿ ತೆರಳುತ್ತಿದ್ದ. ಅಗತ್ಯ ದಾಖಲೆ ಕೇಳಿದಾಗ ಸೂಕ್ತ ಉತ್ತರ ನೀಡಿಲ್ಲ.
ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದು ವಿಚಾರ ನಡೆಸಿದಾಗ ಕಳ್ಳತನ ಮಾಡಿರುವ ವಿಚಾರ ಗೊತ್ತಾಗಿದೆ.
11 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್ ಕದ್ದು ವ್ಹೀಲಿಂಗ್ ಮಾಡಲು ಬಾಡಿಗೆಗೆ ಕೊಡುತ್ತಿದ್ದ. ಪ್ರತಿಯೊಂದು ಬೈಕ್ಗೆ ₹5 ಸಾವಿರ ಪಡೆಯುತ್ತಿದ್ದ ಎನ್ನಲಾಗಿದೆ.