ಕೆಲವೊಬ್ಬರು ಬಾಯಿಯ ದುರ್ನಾತದಿಂದ ಬೇರೆಯವರ ಜೊತೆ ಮಾತನಾಡಲು ಕೂಡ ಮುಜುಗರ ಪಟ್ಟಿಕೊಳ್ಳುತ್ತಿರುತ್ತಾರೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಹೀಗಾದಾಗ ನೀವು ಬಳಸುವ ಟೂತ್ ಪೇಸ್ಟ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಹೀಗಾಗಲು ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ನಾವು ಆಹರ ಸೇವಿಸುವಾಗ ಸಾಮಾನ್ಯವಾಗಿ ಆ ಆಹಾರದ ಕಣಗಳು ಹಲ್ಲು ಮತ್ತು ವಸಡುಗಳಲ್ಲಿ ಸೇರಿಕೊಳ್ಳುತ್ತವೆ. ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅವು ಫ್ಲೆಕ್ ರೂಪವನ್ನು ಪಡೆಯುತ್ತವೆ. ಫ್ಲೆಕ್ ಅನ್ನು ಹಾಗೆಯೇ ಬಿಟ್ಟರೆ ಟಾರ್ಟರ್ ಆಗಿ ಬದಲಾಗುತ್ತದೆ. ಹೌದು, ಈ ಹಳದಿ ಕಲೆಗಳು ಹಲ್ಲುಗಳ ಮೇಲೆ ಜಮೆಯಾಗುತ್ತಾ ಹೋದ ಹಾಗೆ ಆಸಿಡ್ ರಚನೆಗೂ ಅದು ಕಾರಣವಾಗುತ್ತದೆ. ಇದು ಹಲ್ಲಿನ ದಂತಕವಚವನ್ನು ನಾಶಪಡಿಸುತ್ತದೆ. ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ದಂತ ವೈದ್ಯರ ಬಳಿಗೆಯೇ ಹೋಗಬೇಕೆಂದಿಲ್ಲ. ಅವುಗಳನ್ನು ಬಿಳುಪುಗೊಳಿಸಲು ಕೆಲವು ಮನೆಮದ್ದುಗಳನ್ನು ಕೂಡಾ ಪ್ರಯತ್ನಿಸಬಹುದು.
ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಮನೆಮದ್ದುಗಳು:
ಬೇಕಿಂಗ್ ಸೋಡಾ : ಅಡಿಗೆ ಸೋಡಾ ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಬೇಕಿಂಗ್ ಸೋಡಾವನ್ನು ನೀರಿಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಬೇಕಿಂಗ್ ಸೋಡಾದ ಪೇಸ್ಟ್ ನ ಸಹಾಯದಿಂದ ವಾರಕ್ಕೆ ನಾಲ್ಕು ಬಾರಿ ಹಲ್ಲುಗಳನ್ನು ಬ್ರಷ್ ಮಾಡಿ. ಇದು ಹಲ್ಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಅಲೋವೆರಾ ಜೆಲ್ :ಅಲೋವೆರಾ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಲ್ಲಿನ ಪ್ಲೇಕ್ ಅನ್ನು ಕಡಿಮೆ ಮಾಡಲು ಒಸಡಿನ ಸಮಸ್ಯೆ ನಿವಾರಿಸಲು ಅಲೋವೆರಾ ಜೆಲ್ ಅನ್ನು ನೈಸರ್ಗಿಕ ಟೂತ್ ಪೇಸ್ಟ್ ಅಥವಾ ಮೌತ್ವಾಶ್ ಆಗಿ ಬಳಸಿಬಹುದು.
ಗ್ರೀನ್ ಟೀ : ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲ ಗ್ರೀನ್ ಟೀ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಕೂಡಾ ಹೊಂದಿದೆ. ಗ್ರೀನ್ ಟೀಯನ್ನು ನಿಯಮಿತವಾಗಿ ಸೇವಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸಬಹುದು ಮತ್ತು ಪ್ಲೇಕ್ ರಚನೆಯನ್ನು ಕಡಿಮೆ ಮಾಡಬಹುದು.
ವಿಟಮಿನ್ ಸಿ ಆಹಾರಗಳು : ಒಸಡುಗಳ ಆರೋಗ್ಯಕ್ಕೆ ವಿಟಮಿನ್ ಸಿ ಅತ್ಯಗತ್ಯ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು, ಕಿವಿ ಮತ್ತು ಬೆಲ್ ಪೆಪರ್ ಗಳನ್ನು ಸೇರಿಸಿ.
ಎಳ್ಳು : ನೈಸರ್ಗಿಕ ಹಲ್ಳುಜ್ಜುವ ಪುಡಿಯಾಗಿ ಎಳ್ಳನ್ನು ಬಳಸಬಹುದು. ಅದು ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಲ್ಲುಜ್ಜಿದ ನಂತರ, ಒಂದು ಚಮಚ ಎಳ್ಳನ್ನು ತೆಗೆದುಕೊಂಡು ಮತ್ತೆ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಇದು ಹಲ್ಲಿನ ಮೇಲೆ ಅಂಟಿಕೊಂಡಿರುವ ಹಳದಿ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಆಪಲ್ ಸೈಡರ್ ವಿನೆಗರ್ : ಆಪಲ್ ಸೈಡರ್ ವಿನೆಗರ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬಾಯಿಯಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಅದರ ಆಮ್ಲೀಯತೆಯಿಂದಾಗಿ, ಅದರ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ನಂತರ ಮೌತ್ವಾಶ್ ಆಗಿ ಬಳಸಿ.