ಇಸ್ಲಾಮಾಬಾದ್: ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳ ನಡುವೆ, ಆತನ ಕುಟುಂಬದ ಸದಸ್ಯರು ವಿಷಪ್ರಾಶನ ವಿಚಾರವನ್ನು ಅಲ್ಲಗೆಳೆದಿದ್ದಾರೆ. ದಾವೂದ್ ಆರೋಗ್ಯದ ಕುರಿತ ವಿಚಾರ ಹೊರಬೀಳುತ್ತಿದ್ದಂತೆಯೇ ಮುಂಬೈ ಪೊಲೀಸರು ನಗರದಲ್ಲಿರುವ ಅವರ ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ಕಳುಹಿಸಿದ್ದಾರೆ. ಆಗ ದಾವೂದ್ ಸೋದರಳಿಯ, ಆರೋಗ್ಯ ಸಮಸ್ಯೆಗಳಿಂದ ಚೆನ್ನಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ವಿಷಪ್ರಾಶನವಾಗಿಲ್ಲ (Poisoning) ಎಂದು ಅವರು ತಿಳಿಸಿದ್ದಾರೆ.
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
ಭಾನುವಾರ ರಾತ್ರಿಯಿಂದ ದಾವೂದ್ ಆರೋಗ್ಯದ ಬಗ್ಗೆ ವರದಿಗಳು ಹೊರಬಿದ್ದಿವೆ. ಆದರೆ ಭಾರತೀಯ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ. ಈ ಸಂಬಂಧ ಪಾಕಿಸ್ತಾನ ಸರ್ಕಾರದಿಂದಲೂ ಅಧಿಕೃತ ಮಾಹಿತಿ ಇಲ್ಲ. ವಿಷಪ್ರಾಶನದಿಂದಾಗಿ ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗಿದೆ. ಸದ್ಯ ದಾವೂದ್ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ (Karachi Hospital) ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಪಾಕ್ ಸೇನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಕರಾಚಿ, ರಾವಲ್ಪಿಂಡಿ, ಲಾಹೋರ್ ಹಾಗೂ ಇಸ್ಲಾಮಾಬಾದ್ನಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.