ವಾಷಿಂಗ್ಟನ್: ಕ್ರೀಡಾ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬಳು (US Teacher) ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯ ತಾಯಿ ರೆಡ್ಹ್ಯಾಂಡಾಗಿ ಹಿಡಿದು ಶಿಕ್ಷಿಯನ್ನ ಪೊಲೀಸರಿಗೆ (US Police) ಒಪ್ಪಿಸಿರುವ ಘಟನೆ ಅಮೆರಿಕದ ಕೌಂಟಿಯಲ್ಲಿ ನಡೆದಿದೆ. 2008ರಲ್ಲಿ ಪರಿಚಯಿಸಲಾದ ಲೈಫ್360 ಅಪ್ಲಿಕೇಷನ್ (Life360 Tracking App) ಬಳಿಸಿ ಅಮೆರಿಕದ ಮಹಿಳೆಯೊಬ್ಬರು ತನ್ನ ಮಗ ಶಿಕ್ಷಕಿಯೊಂದಿಗೆ ಅನೈಕ ಸಂಬಂಧ ಇಟ್ಟುಕೊಂಡಿರುವುದನ್ನ ಪತ್ತಹೆಚ್ಚಿದ್ದಾರೆ.
2008ರಲ್ಲಿ ಪರಿಚಯಿಸಲಾದ ಈ ಆ್ಯಪ್ ಫ್ಯಾಮಿಲಿ ಸೋಶಿಯಲ್ ನೆಟ್ವರ್ಕಿಂಗ್ ಅಪ್ಲಿಕೇಶನ್ ಆಗಿದ್ದು. ಮತ್ತೊಬ್ಬ ವ್ಯಕ್ತಿಯ ಇರುವಿಕೆಯನ್ನು ಗುರುತಿಸುತ್ತದೆ. ಜೊತೆಗೆ ವ್ಯಕ್ತಿ ಎಲ್ಲಿದ್ದಾರೆ? ಯಾರ ಜೊತೆ ಇದ್ದಾರೆ ಎಂಬುದನ್ನ ತಿಳಿಯುವುದಕ್ಕೂ ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್ ಸಹಾಯದಿಂದಲೇ ತನ್ನ ಮಗನೊಟ್ಟಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಶಿಕ್ಷಕಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
18 ವರ್ಷದ ವಿದ್ಯಾರ್ಥಿ ಸೌತ್ ಮೆಕ್ಲೆನ್ಬರ್ಗ್ ಹೈಸ್ಕೂಲ್ನ 26 ವರ್ಷದ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಯಾಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದನು. ರಗ್ಬಿ ಕ್ರೀಡಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿ ಪ್ರತಿದಿನವೂ ತಡವಾಗಿ ಬರುತ್ತಿದ್ದನು. ಇದರಿಂದ ಅನುಮಾನಗೊಂಡ ತಾಯಿ ಆತನನ್ನು ಹಿಂಬಾಲಿಸಲು ಶುರು ಮಾಡಿದಳು. ಅಂದೊಂದು ದಿನ ಕೌಂಟಿ ನಗರದ ಉದ್ಯಾನವೊಂದರಲ್ಲಿ ಶಿಕ್ಷಕ್ಷಿ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು.
ಈ ವೇಳೆ ಲೈಫ್360 ಅಪ್ಲಿಕೇಷನ್ ಬಳಿಸಿ ಹಿಂಬಾಲಿಸಿಕೊಂಡು ಬಂದಿದ್ದ ತಾಯಿ ರೆಡ್ಹ್ಯಾಂಡಾಗಿ ಹಿಡಿದು ಶಿಕ್ಷಕಿಯನ್ನ ಪೊಲೀಸರಿಗೆ ಒಪ್ಪಿದ್ದಾರೆ. ಬಳಿಕ ಶಿಕ್ಷಕಿ ಹಿನ್ನೆಲೆಯನ್ನು ಪರಿಶೀಲಿಸಿದಾಗ ಅಂದು ಆಕೆ ಥ್ಯಾಂಕ್ಸ್ಗಿವಿಂಗ್ ವಿಶೇಷ ಸಂದರ್ಭದ ರಜೆ ತೆಗೆದುಕೊಂಡಿದ್ದಳು. ಈ ವೇಳೆ ವಿದ್ಯಾರ್ಥಿ ಜೊತೆಗೆ ಅನುಚಿತ ವರ್ತನೆಯಲ್ಲಿ ತೊಡಗಿದ್ದಳು ಎಂದು ತಿಳಿದುಬಂದಿದೆ. ಅಪರಾಧ ಸಾಬೀತಾದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.