ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಕಾರ್ತಿಕ್ ಆಗಬಹುದು ಎಂದು ಪವಿ ಪೂವಪ್ಪ ಭವಿಷ್ಯ ನುಡಿದಿದ್ದಾರೆ.
ಹೌದು,ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಹಳೆಯ ಎಪಿಸೋಡ್ಗಳನ್ನು ನೋಡಿಕೊಂಡು, ಸದಸ್ಯರ ವರ್ತನೆಗಳನ್ನು ಅರಿತುಕೊಂಡು ಲೆಕ್ಕಾಚಾರ ಮಾಡಿ ಆಡುವ ಅವಕಾಶ ಇರುವುದರಿಂದ ಅವರಿಂದ ಮನೆಯ ಪರಿಸ್ಥಿತಿಯೇ ಬದಲಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಮನೆಯೊಳಗೆ ಪವಿತ್ರಾ ಅಂದುಕೊಂಡಷ್ಟೇನೂ ಸದ್ದು ಮಾಡಲಿಲ್ಲ.
ಒಂದು ವಾರ ಉತ್ತಮ ಪಡೆದುಕೊಂಡು ಇನ್ನೊಂದು ವಾರ ಜೈಲುಶಿಕ್ಷೆಯನ್ನೂ ಅನುಭವಿಸಿದ್ದು ಅವರ ಆಟದ ಏರಿಳಿತವನ್ನು ಸೂಚಿಸುವಂತಿದೆ. ಒಳಗೆ ಹೋಗಿ ಮೂರೇ ವಾರಕ್ಕೆ ಮರಳಿ ಬಂದಿರುವ ಅವರು ಮನೆಯಿಂದ ಹೊರಬಿದ್ದಿದ್ದೇ JioCinemaಗೆ ಎಕ್ಸ್ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ.
ಮೂರು ವಾರಗಳ ಪುಟ್ಟ ಜರ್ನಿಯ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.
‘ನಾನು ಪವಿ ಪೂವಪ್ಪ. ಈವಾಗ ಜಸ್ಟ್ ಬಿಗ್ಬಾಸ್ ಸೀಸನ್ 10 ಮನೆಯಿಂದ ಹೊರಗೆ ಬಂದಿದ್ದೇನೆ.
ಮನೆಯಿಂದ ಹೊರ ಬರುವ ಸಣ್ಣ ಸುಳಿವಿತ್ತು
ಸಣ್ಣ ಸುಳಿವು ಇತ್ತು. ಮನೆಯಿಂದ ಹೊರಬರುವ ನಿರೀಕ್ಷೆ ಸಣ್ಣದಾಗಿ ಇತ್ತು. ಆದರೆ ಖಚಿತವಾಗಿ ಗೊತ್ತಿರಲಿಲ್ಲ. 80% ಹೊರಗೆ ಬರಬಹುದು ಅಂದುಕೊಂಡಿದ್ದೆ. ಎಲ್ಲರೂ ನನ್ನ ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿ, ಈ ವಾರ ಹೊಗಬಹುದು ಅಂದುಕೊಂಡಿದ್ದೆ. ಈ ವಾರ ನಾನು ಸ್ವಲ್ಪ ಲ್ಯಾಕ್ ಆದೆ. ಸ್ವಲ್ಪ ಕಮ್ಮಿ ಪ್ರಯತ್ನಪಟ್ಟಿದ್ದೂ ಇದಕ್ಕೆ ಕಾರಣವಾಯ್ತು ಎಂದರು.
ನಾನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗ ಸಡನ್ ಆಗಿ ಯಾರನ್ನೂ ಫ್ರೆಂಡ್ಸ್ ಮಾಡ್ಕೊಂಡಿಲ್ಲ. ಎಲ್ಲರ ಜೊತೆಗೂ ಚೆನ್ನಾಗೇ ಇದ್ದೆ. ಒಂದು ಸೆಟ್ ಆಫ್ ಪೀಪಲ್, ನನಗೆ ಕಂಪರ್ಟಬಲ್ ಅನಿಸಿದ್ರು. ಹಾಗಾಗಿ ಅವರ ಜೊತೆಗೆ ಚೆನ್ನಾಗಿದ್ದೆ. ಸಂಗೀತಾ, ಕಾರ್ತಿಕ್ ತಂಡ ನನ್ನನ್ನು ಟಾರ್ಗೆಟ್ ಮಾಡುತ್ತಿದ್ರು. ಅವಿನಾಶ್ ಅವರನ್ನು ಅವರ ಕಡೆ ಎಳ್ಕೊಂಡು, ವಿನಯ್ ತಂಡದಲ್ಲಿದ್ದೀನಿ ಅಂದ್ಕೊಂಡು ನನ್ನ ಮೇಲೆ ಟಾರ್ಗೆಟ್ ಮಾಡ್ಕೊಂಡು ಬಂದ್ರು. ವಿನಯ್ ಮೇಲಿರುವ ಕೋಪಕ್ಕೆ ನಾನು ಬಲಿಯಾದೆ ಅನಿಸುತ್ತದೆ.
ಕಾರ್ತಿಕ್ ವಿನ್ನರ್ ಆಗಬಹುದು ಅನಿಸುತ್ತದೆ. ವಿನಯ್ ಮತ್ತು ನಮ್ರತಾ ನನ್ನ ಫ್ರೆಂಡ್ ಆಗಿದ್ದರೂ, ಕಾರ್ತೀಕ್ ಏನೋ ಪಾಸಿಟಿವ್ ವೈಬ್ ಕೊಡ್ತಾರೆ. ಬಹುಶಃ ನೋಡುವವರಿಗೂಹಾಗೆಯೇ ಅನಿಸಬಹುದು. ಎಷ್ಟೇ ಚೆನ್ನಾಗಿ ಆಡಿದರೂ, ಅಗ್ರೆಸಿವ್ ಆಗಿ ಆಡಿದರೂ ಕುಟುಂಬಕ್ಕೆ ಹೋಲುತ್ತಾರೆ. ಆದರೆ ವಿನಯ್ ಅವರನ್ನು ಎಲ್ಲರೂ ಅಗ್ರೆಸಿವ್ ಆಗುತ್ತಾರೆ ಎನ್ನುತ್ತಾರೆ. ಆದರೆ ಅವರು ಹಾಗೆ ಇಲ್ಲ.ನಾವು ಮನೆಯೊಳಗೆ ಹೋಗುವಾಗ ನಮಗೊಂದು ವಿಶೇಷಾಧಿಕಾರ ಸಿಕ್ಕಿತ್ತು. ಯಾರನ್ನಾದರೂ ಸೇವ್ ಮಾಡಬಹುದು ಎಂದು. ಆಗ ನಾವು ಸಿರಿ ಮತ್ತು ತುಕಾಲಿ ಅವರನ್ನು ಸೇವ್ ಮಾಡಿದ್ವಿ. ನಾವು ಮಾಡಿರುವ ಮೊದಲ ತಪ್ಪು ಅದು. ಅವರನ್ನು ಸೇವ್ ಮಾಡಿರದಿದ್ದರೆ ಅವರು ಈ ಜಾಗದಲ್ಲಿರುತ್ತಿದ್ರು. ನಾವು ಮಾಡಿದ ಮೊದಲ ತಪ್ಪು ಅದು.