ಚಿಕ್ಕಬಳ್ಳಾಪುರ: ಹೆಂಡತಿ ಸಮಾಧಿಗೆ ಪೂಜೆ ಮಾಡಿ ಹೆಂಡತಿ ಸಮಾಧಿ ಎದುರೇ ಗಂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದ ತೀಮಾಕಲಪಲ್ಲಿ ಸ್ಮಶಾನದಲ್ಲಿ ನಡೆದಿದೆ. ಬಾಗೇಪಲ್ಲಿ ನಗರದ 16 ನೇ ವಾರ್ಡ್ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಗುರುಮೂರ್ತಿ ಅಲಿಯಾಸ್ ಲೆಗ್ ಆತ್ಮಹತ್ಯೆಗೆ ಶರಣಾಗಿರವ ವ್ಯಕ್ತಿ.
ಅಂದಹಾಗೆ ಕಳೆದ ವರ್ಷ ಡಿಸೆಂಬರ್ 20 ರಂದು ಪತ್ನಿ ಮೌನಿಕಾ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಳು. ಇನ್ನೂ ಹೆಂಡತಿ ಸಾವಿನ ನೋವಲ್ಲೇ ಮಾನಸಿಕ ಕಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ! ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ವಾಕಿಂಗ್ ಹೋಗಿ ಬರೋದಾಗಿ ಹೇಳಿ ಹೋಗಿರೋ ಗುರುಮೂರ್ತಿ ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ತದನಂತರ ಅಲ್ಲೇ ಇದ್ದ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.