ರಾಯಚೂರು : ಹತ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ ಹಗ್ಗ ಲಾರಿಗೆ ಸಿಕ್ಕು, ಟ್ರ್ಯಾಕ್ಟರ್ ರಸ್ತೆಯಲ್ಲಿ ಪಲ್ಟಿಯಾಗಿ, ಹತ್ತಿ ಚೆಲ್ಲಾಪಿಪ್ಪಿಯಾದ ಘಟನೆ ನಡೆದಿದೆ. ನಗರದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ, ಹತ್ತಿ ತುಂಬಿಕೊಂಡು, ಮಾರುಕಟ್ಟೆಗೆ ಹೋಗುತ್ತಿದ್ದ ಟ್ರಾಕ್ಟರ್ಗೆ ಎದುರಿಗೆ ಬಂದ ಲಾರಿ, ಸೈಡ್ ಹೋಗುತ್ತಿದ್ದಾಗ ಲಾರಿಯ ಕೊಂಡಿಗೆ ಟ್ರಾಕ್ಟರ್ಗೆ ಕಟ್ಟಿದ್ದ ಹಗ್ಗ ಸಿಲುಕಿದೆ.
ಇದನ್ನು ಗಮನಿಸದೇ ಲಾರಿ ಮುಂದೆ ಚಲಿಸಿದೆ, ಇದರಿಂದಾಗಿ ಟ್ರ್ಯಾಕ್ಟರ್ ನಡು ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ರಸ್ತೆಯಲ್ಲಿ ಹತ್ತಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ನಡು ರಸ್ತೆಯಲ್ಲಿ ಘಟನೆ ನಡೆದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಚಾರಿ ಪೋಲಿಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆಯು ಸಂಚಾರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.