ಬೆಂಗಳೂರು: ಟ್ರಾಫಿಕ್ ಪೊಲೀಸ್ರು ಗಾಡಿ ಹಿಡಿತಿಲ್ಲ. ಫೈನ್ ಹಾಕ್ತಿಲ್ಲ, ರೋಡಲ್ಲಿ ಅವ್ರು ಕಾಣ್ತಿಲ್ಲ ಅಂತ ಅಡ್ಡಾದಿಡ್ಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ದಂಡಾಸ್ತ್ರದಿಂದ ಮಿಸ್ ಆಗೋಕೆ ಚಾನ್ಸೇ ಇಲ್ಲ. ಮನಡ ಹತ್ರ ತಾನೇ ಹೀಗ್ ಹೋಗಿ ಹಾಗ್ ಬರೋಣ ಅಂತ ಹೆಲ್ಮೆಟ್ ಇಲ್ದೆ, ರಾಂಗ್ ರೂಟ್ ನಲ್ಲಿ ಓಡಾಡಿದ್ರೆ ಫೈನ್ ಮಿಸ್ ಆಗಲ್ಲ. ಸದ್ಯ ನಗರದಲ್ಲಿ ಸಿಗ್ನಲ್ ನಲ್ಲಿ ಮತ್ತು ರಸ್ತೆಗಳಲ್ಲಿರೋ ಸೇಫ್ ಸಿಟಿ ಕ್ಯಾಮರದಲ್ಲೂ ನಿಮ್ಮ ಚಲನವಲನ ಕ್ಯಾಪ್ಚರ್ ಆಗುತ್ತೆ.
ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಪರಿಣಾಮ ಆಕ್ಟೀವಾ ಸ್ಕೂಟರ್ ಮೇಲೆ ಬರೋಬ್ಬರಿ 3.22ಲಕ್ಷ ಫೈನ್ ಬಿದ್ದಿದೆ. ಆರ್ ಟಿ ನಗರ ಗಂಗಾನಗರ ಬಳಿ ಒಡಾಡಿರೋ KA 04 KF9072 ಸ್ಕೂಟರ್ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ.ಮಾಲ ಎಂಬುವವರಿಗೆ ಸೇರಿದ ಸ್ಕೂಟರ್ ನಲ್ಲಿ ಹೆಲ್ಮೆಟ್ ಧರಿಸದೆ ಓಡಾಡಿರೋ ಪರಿಣಾಮ ಮೂರು ಲಕ್ಷಕ್ಕೂ ಹೆಚ್ಚು ಫೈನ್ ಬಿದ್ದಿದೆ. ಸ್ಕೂಟರ್ ಬೆಲೆನೆ 70-80ಸಾವಿರ ಇದ್ದು ದಂಡದ ಮೊತ್ತ ಇದ್ರ ನಾಲ್ಕು ಪಟ್ಟು ಹೆಚ್ಚಾಗಿದೆ. ಇನ್ನು ಮುಂದಾದ್ರು ಸಂಚಾರಿ ನಿಯಮ ಪಾಲನೆ ಮಾಡದಿದ್ರೆ ನಿಮಗೂ ಇಂಥಹ ಗತಿ ಬರಬಹುದು ಎಚ್ಚರ.