ಬೆಂಗಳೂರು: ದೇಶದಲ್ಲಿ ಕೋವಿಡ್ ಅರ್ಭಟ ಯಾಕೋ ನಿಲ್ಲವ ಲಕ್ಷಣ ಕಾಣ್ತಿಲ್ಲ.ಅಲೆಗಳ ಮೇಲೆ ಅಲೆಗಳು ಬಂದು ಈಗಾಗಲೇ ಜನರನ್ನ ಹಿಂಡಿ ಹಿಪ್ಪೆ ಮಾಡಿರೋ ಈ ಕ್ರೂರಿ ಇದೀಗ ಮತ್ತಷ್ಟು ಆತಂಕ ಹುಟ್ಟಿಸಿದೆ. ದೇಶದ ಕೆಲ ರಾಜ್ಯಗಳಲ್ಲಿ ಸೈಲೆಂಟ್ ಆಗಿ ಕೊರೋನಾ ಉಲ್ಬಣವಾಗ್ತಿರೋದು ಮತ್ತೆ ಆ ದಿನಗಳು ಬರುತ್ತಾ ಅನ್ನೋ ಪ್ರಶ್ನೆ ಮೂಡಿದೆ.. ಕೇರಳದಲ್ಲಿ ಕೊರೋನಾ ನರ್ತನದಿಂದ ಅಲರ್ಟ್ ಆಗಿರೋ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದೆ. ಹಾಗಾದ್ರೆ ನಾಡಿದ್ದು ಸಲಹಾ ಸಮಿತಿ ಏನೆಲ್ಲಾ ಸಲಹೆ ನೀಡ್ತಾರೆ ಬನ್ನಿ ಹೇಳ್ತೀವಿ
ದೇಶದಲ್ಲಿ ಕೊರೋನಾ ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳಾಗಿ ಬಂದು ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಕಳೆದ ಎರಡು ವರ್ಷದಿಂದ ಮರೆಯಾಗಿದ್ದ ಡೆಡ್ಲಿ ಕ್ರೂರಿ ಮತ್ತೆ ವಕ್ಕರಿಸಿದೆ.ಕಳೆದ ಕೆಲ ದಿನದಿಂದ ಕೇರಳ ತಮಿಳುನಾಡು ಸೇರಿ ಹಲವೆಡೆ ಕೊರೊನಾ ಕೇಸ್ ಗಳ ಸಂಖ್ಯೆ ಉಲ್ಬಣಗೊಂಡಿದೆ.ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಹೊಸ ಸಬ್ ವೇರಿಯಂಟ್ ಜೆಎನ್-1 ಇದೀಗ ಭಾರತದಲ್ಲೂ ಪತ್ತೆಯಾಗಿದ್ದು, ದೇಶದೆಲ್ಲೆಡೆ ಆತಂಕ ಮನೆ ಮಾಡಿದೆ.
ಹೌದು..ಕೇರಳದಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಆತಂಕದ ಕಾರ್ಮೋಡ ಕವಿಯ ತೊಡಗಿದೆ. ಕೇರಳದಲ್ಲಿ ಕೇಸ್ ಹೆಚ್ಚಳದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು,ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ನಿನ್ನೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿರೋ ಆರೋಗ್ಯ ಸಚಿವರು ಮುಂದಿನ 3 ತಿಂಗಳಿಗೆ ಅವಶ್ಯಕತೆ ಇರುವಷ್ಟು ಟೆಸ್ಟಿಂಗ್ ಕಿಟ್ಟನ್ನ ಕರ್ನಾಟಕ ಮೆಡಿಕಲ್ ಕಾರ್ಪೋರೆಶನ್ನಿಂದ ಖರೀದಿ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.ಇನ್ನೂ ಮಂಗಳವಾರ ಡಾ.ರವಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ, ತಜ್ಞರಿಂದ ಸಲಹೆಗಳನ್ನು ಪಡೆಯಲು ಮುಂದಾಗಿದ್ದಾರೆ. ಕೋವಿಡ್ ಮಾರ್ಗಸೂಚಿ ಹೊರಡಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆಯಲು ಸರ್ಕಾರ ಮುಂದಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಏನೆಲ್ಲಾ ರೂಲ್ಸ್ ಏನು ಜಾರಿಯಾಗಬಹುದು ? ಮಾರ್ಗಸೂಚಿ ಹೇಗಿರಲಿದೆ.?
-ಆಸ್ಪತ್ರೆ ಒಳಗಡೆ ಹೆಲ್ತ್ ವರ್ಕರ್ಸ್ ಕಡ್ಡಾಯ ಮಾಸ್ಕ್ ಧರಿಸಬೇಕು
-. ಮಾಸ್ಕ್ ಧರಿಸಿಯೇ ವೈದ್ಯರು ರೋಗಿಗಳಿಗೆ ಟ್ರೀಟ್ ಮೆಂಟ್ ಕೊಡಬೇಕು
– ಆಸ್ಫತ್ರೆಗಳಲ್ಲಿ ಮತ್ತು ಜನಸಂದಣಿ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
– ಜ್ವರ ಮತ್ತು ಶೀತದ ನಡುವೆ ಬೇರೆ ಖಾಯಿಲೆಗಳಿಂದ ಬಳಲುತ್ತಾ ಇರುವವರು ಸ್ವ ಚಿಕಿತ್ಸೆಗೆ ಒಳಗಾಗದೇ ವೈದ್ಯರನ್ನ ಭೇಟಿ ಮಾಡಬೇಕು
-. ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಕೊವಿಡ್ ಟೆಸ್ಟ್ ಟಾರ್ಗೆಟ್
-ಆಸ್ಫತ್ರೆಗಳಲ್ಲಿ ರೋಗ ಲಕ್ಷಣಗಳು ಇರುವ ರೋಗಿಗಳು ಇದ್ರೆ ಕೊವಿಡ್ ಟೆಸ್ಟ್ ಕಡ್ಡಾಯ
-. ಸಾರ್ವಜನಿಕರನ್ನ ಜಾಗೃತರಾಗಲು ಜಾಗೃತಿ ಕಾರ್ಯಕ್ರಮ
-. ಬೆಡ್, ಐಸಿಯು ಮತ್ತು ವೈದ್ಯಕೀಯ ಉಪಕರಣಗಳ ಸಿದ್ದತೆ
ಕೋವಿಡ್ ಮೆಟ್ಟಿ ನಿಂತ ಭಾರತಕ್ಕೆ ಹೊಸ ತಳಿಯ ರೂಪದಲ್ಲಿ ಕೊರೊನಾ ರೀ ಎಂಟ್ರಿ ಕೊಟ್ಟಿದೆ. ಇದರಿಂದ ಮತ್ತೆ ಲಾಕ್ಡೌನ್ನಂಥ ಕಡಿಣ ನಿಯಮಗಳು ಜಾರಿ ಆಗ್ತಾವಾ ಅನ್ನೋ ಅನುಮಾನ ಕಾಡತೊಡಗಿದೆ