ಬೆಂಗಳೂರು: ಜಗದೀಶ್ ಶೆಟ್ಟರ್ (Jagadeesh Shettar) ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ನನಗೇನೂ ತೊಂದರೆಯಿಲ್ಲ. ಸ್ಪರ್ಧೆ ಮಾಡಲಿ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸವಾಲ್ ಹಾಕಿದ್ದಾರೆ.
ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಲೋಕಸಭೆ ಅಭ್ಯರ್ಥಿ ಆಗೋ ಇಚ್ಛೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ನಾಯಕರು ಹೀಗಾಗಿ ಸಿಎಂ ಅವರು ಅವರ ಮನೆಗೆ ಹೋಗಿ ಭೇಟಿ ಕೊಟ್ಟಿದ್ದಾರೆ. ಶೆಟ್ಟರ್ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಬಹಳ ಸಂತೋಷ. ಅವರ ಪಕ್ಷದ ಅಭ್ಯರ್ಥಿ ಯಾರು ಅಂತ ನಮ್ಮನ್ನ ಕೇಳೋದು ಬೇಡ ಎಂದರು.
ನಾನು ಈಗ ಬಿಜೆಪಿಯ (BJP) ಹುಬ್ಬಳ್ಳಿ-ಧಾರವಾಡದಲ್ಲಿ ಎಂಪಿ ಆಗಿದ್ದೇನೆ ನಾನು ಹುಬ್ಬಳ್ಳಿಯಿಂದಲೇ ಮತ್ತೆ ಸ್ಪರ್ಧೆ ಮಾಡ್ತೀನಿ.ಶೆಟ್ಟರ್ ಬಂದರೆ ನನಗೇನೂ ಭಯ ಇಲ್ಲ. ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು ಎಂದು ಹೇಳಿದರು.