ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ಮತ್ತೆ ಭಾರೀ ಏರಿಕೆ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 969.55 ಅಂಕ ಅಥವಾ ಶೇ. 1.37ರಷ್ಟು ಏರಿಕೆ ಕಂಡು 71,483.75 ಅಂಕ ತಲುಪಿದೆ. ನಿನ್ನೆ ಕೂಡ ಸೆನ್ಸೆಕ್ಸ್ 929.60 ಅಂಕ ಗಳಿಕೆ ಕಂಡಿತ್ತು. ಇದರಿಂದ ಕೇವಲ 2 ದಿನದಲ್ಲಿ ಷೇರು ಹೂಡಿಕೆದಾರರ ಆಸ್ತಿ ಸುಮಾರು 7 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
30 ಷೇರುಗಳ ಸೆನ್ಸೆಕ್ಸ್ ಗುಚ್ಛದಲ್ಲಿ 27 ಷೇರುಗಳು ಏರಿಕೆ ಕಂಡಿದ್ದರೆ, 3 ಷೇರುಗಳು ಇಳಿಕೆ ಕಂಡಿವೆ. ಸೋಮವಾರದ ವಹಿವಾಟಿನಲ್ಲಿ ಐಟಿ ಮತ್ತು ರಿಯಾಲ್ಟಿ ಷೇರುಗಳಲ್ಲಿ ಹೆಚ್ಚಿನ ಏರಿಕೆ ದಾಖಲಿಸಿವೆ.
ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 2 ರಂದು (ಜನವರಿ 1 ರಂದು ಮಾರುಕಟ್ಟೆ ಮುಚ್ಚಿತ್ತು) ಸೆನ್ಸೆಕ್ಸ್ 61,167 ಮಟ್ಟದಲ್ಲಿತ್ತು. ಈಗ ಡಿಸೆಂಬರ್ 15 ರಂದು 71,483 ಅಂಕಳನ್ನು ತಲುಪಿದೆ. ಅಂದರೆ, ಈ ವರ್ಷ ಇದುವರೆಗೆ ಶೇ. 15ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಏರಿಕೆಯು ಭವಿಷ್ಯದಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ.
ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಗರಿಷ್ಠ ನಷ್ಟ ಅನುಭವಿಸಿದ ಷೇರು ಆಗಿದ್ದು ಶೇ. 1.83ರಷ್ಟು ಇಳಿಕೆ ಕಂಡಿದೆ. ನೆಸ್ಟ್ಲೆ ಇಂಡಿಯಾ, ಭಾರ್ತಿ ಏರ್ಟೆಲ್, ಎಸ್ಬಿಐ ಲೈಫ್ ಇನ್ಶೂರೆನ್ಸ್ ಹಾಗೂ ಬಜಾಜ್ ಆಟೋ ನಷ್ಟಕ್ಕೀಡಾದ ಇತರ ಪ್ರಮುಖ ಷೇರುಗಳಾಗಿವೆ.