ಬೆಂಗಳೂರು: ಟೀಮ್ ಇಂಡಿಯಾದ ಯುವ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26ರಂದು ಶುರುವಾಗಲಿದೆ.
ಇಶಾನ್ ಕಿಶನ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಹೊರಗುಳಿಯಲು ಮನವಿ ಮಾಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ಅವರು ಈ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅವರನ್ನು ಸರಣಿಯಿಂದ ಹೊರಗಿಡಲಾಗಿದೆ,” ಎಂದು ಬಿಸಿಸಿಐ ಹೇಳಿಕೆ ನೀಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20-ಐ ಸರಣಿಯಲ್ಲಿ ಇಶಾನ್ ಕಿಶನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಆಡುವ 11ರ ಬಳಗದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಸರಣಿಯ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್ ಬದಲು ಜಿತೇಶ್ ಶರ್ಮಾ ಅವರನ್ನು ಆಡಿಸಲಾಗಿತ್ತು. ಸರಣಿಯ ಮೊದಲ ಪಂದ್ಯ ಮಳೆ ಕಾರಣ ರದ್ದಾಗಿತ್ತು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತದಲ್ಲೇ ನಡೆದ 5 ಪಂದ್ಯಗಳ ಟಿ20-ಐ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಬ್ಯಾಕ್ ಟು ಬ್ಯಾಕ್ ಫಿಫ್ಟಿ ಬಾರಿಸಿದ್ದ ಇಶಾನ್ ಕಿಶನ್ ಶ್ರೇಷ್ಠ ಲಯದಲ್ಲಿದ್ದರು. ಇನ್ನು ಬದಲಿ ವಿಕೆಟ್ಕೀಪರ್ ಕೆಎಸ್ ಭರತ್ ಇತ್ತೀಚೆಗೆ ನಡೆದ ಹರಿಣಗಳ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 6 ರನ್ ಮಾತ್ರವೇ ಗಳಿಸಿದ್ದಾರೆ. ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ ಭಾರತದ ತಂಡಗಳ ನಡುವಣ ಅಭ್ಯಾಸ ಪಂದ್ಯದಲ್ಲಿಯೂ ಕೆಎಸ್ ಭರತ್ ಆಡಲಿದ್ದಾರೆ.