ಲಕ್ನೋ: ಉತ್ತರ ಪ್ರದೇಶದಿಂದ (Uttar Pradesh) ಜೈಪುರಕ್ಕೆ (Jaipur) ಬರುತ್ತಿದ್ದ ಬಸ್ಸಿನಲ್ಲಿ 20 ವರ್ಷದ ದಲಿತ ಯುವತಿ (Dalit Girl) ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 9ರ ಮಧ್ಯರಾತ್ರಿ ಖಾಸಗಿ ಬಸ್ ಉತ್ತರ ಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಕ್ಯಾಬಿನ್ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್ನೊಳಗೆ ಆರಿಫ್ ಮತ್ತು ಲಲಿತ್ ಎಂದು ಗುರುತಿಸಲಾದ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
ಆರೋಪಿಗಳ ಪೈಕಿ ಆರಿಫ್ನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಕನೋಟಾ ಪೊಲೀಸ್ ಠಾಣೆಯ ಎಸ್ಹೆಚ್ಒ ಭಗವಾನ್ ಸಹಾಯ್ ಮೀನಾ ತಿಳಿಸಿದ್ದಾರೆ. ಘಟನೆಯ ಬಳಿಕ ಇನ್ನೋರ್ವ ಆರೋಪಿ ಲಲಿತ್ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆ ಕ್ಯಾಬಿನ್ನಲ್ಲಿದ್ದಾಗ ಬಸ್ನೊಳಗೆ ಕೆಲವು ಪ್ರಯಾಣಿಕರಿದ್ದರು. ಆದರೆ ಕ್ಯಾಬಿನ್ ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ಈ ಘಟನೆ ಸಂಭವಿಸಿದ ಸಂದರ್ಭ ಯುವತಿ ಎಮರ್ಜೆನ್ಸಿ ಅಲಾರಾಂ ಒತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕರು ಬಸ್ ನಿಲ್ಲಿಸಿ ಆರಿಫ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಲಲಿತ್ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ಎಸ್ಹೆಚ್ಒ ಹೇಳಿದ್ದಾರೆ.