ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಬಂಗಾರ ಲೇಪನಾ ಕಳಸರೋಹಣ ಸಮಾರಂಭ ನಡೆಯಲಿದೆ. ಡಿಸೆಂಬರ 18. 12. 2023 ರಂದು ಮುಂಜಾನೆ 9 ಗಂಟೆಗೆ ಶ್ರೀ ವೈಭವ ಚಿತ್ರಮಂದಿರದಿಂದ ಭವ್ಯ ಬಂಗಾರ ಲೇಪನಾ ಕಳಸದ ಮೆರವಣಿಗೆ ಕುಂಭಮೇಳ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಬನಹಟ್ಟಿಯ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಶ್ರೀ ಕಾಡುಸಿದ್ದೇಶ್ವರ ದೇವಾಲಯಕ್ಕೆ ತಲುಪಿದೆ.
ಬಂಗಾರ ಲೇಪನಾ ಕಳಸೋತ್ಸವ ಕಾರ್ಯಕ್ರಮದಲ್ಲಿ ಬನಹಟ್ಟಿಯ 34 ಸಮಾಜದ ಹಿರಿಯರು ಕೂಡಿ ಅದ್ದೂರಿಯಾಗಿ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀಶೈಲ ದಬಾಡಿ ಶಂಕರ ಸೋರಗಾಂವಿ. ಶ್ರೀಪಾದ ಬಾಣಕಾರ. ಪಂಡಿತ ಪಟ್ಟಣ. ರಾಜಶೇಖರ ಮಾಲಾಪುರ. ಸಿದ್ದನಗೌಡ ಪಾಟೀಲ. ಬಿಮಶಿ ಮಗದುಮ. ದಾನಪ್ಪ ಹುಲಜತ್ತಿ. ಮಲ್ಲಿಕಾರ್ಜುನ ಬಾಣಕಾರ.ಅಶೋಕ ರಾವಳ. ಶಂಕರ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ